ನವದೆಹಲಿ: ಮುಂದಿನ ಕೆಲವು ದಿನಗಳಲ್ಲಿ ಈಕ್ವಿಟಿ ಮಾರುಕಟ್ಟೆಗಳು ಏರಿಕೆಯಾಗುವ ನಿರೀಕ್ಷೆಯಿದೆ. ಹಾಗಾಗಿ ದೀರ್ಘಕಾಲೀನ ಹೂಡಿಕೆದಾರರು ಚಿಂತಿಸಬೇಕಾಗಿಲ್ಲ ಎಂದು ಜಿಸಿಎಲ್ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ರವಿ ಸಿಂಘಾಲ್ ಹೇಳಿದ್ದಾರೆ.
ಈಗಾಗಲೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದೆ. ಹಾಗಾಗಿ ಮಾರುಕಟ್ಟೆಯು ಶೇ.3 ರಷ್ಟು ಕುಸಿತ ಕಂಡಿದೆ. ಇದಕ್ಕೆ ಯುಎಸ್ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಮಾರುಕಟ್ಟೆಯ ಏರಿಕೆ ಅವಲಂಬಿತವಾಗಿರುತ್ತದೆ. ಯುಎಸ್ ಉಕ್ರೇನ್‌ಗೆ ಮಿಲಿಟರಿ ಕಳುಹಿಸಿದರೆ, ಅದು ಮಾರುಕಟ್ಟೆಗೆ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಆದರೆ, ಆ ಸಾಧ್ಯತೆ ಕಡಿಮೆ ಇದೆ. ರಷ್ಯಾ ಉಕ್ರೇನ್ನಿಂದ ಸೇನೆಯನ್ನು ಹಿಂತೆಗೆದುಕೊಂಡು, ಯುದ್ಧವನ್ನು ಇಲ್ಲಿಗೆ ನಿಲ್ಲಿಸಿದರೆ ಒಳ್ಳೆಯದು. ಇದರಿಂದ ಮಾರುಕಟ್ಟೆ ಯಾವುದೇ ದೊಡ್ಡ ಕುಸಿತ ಕಾಣುವುದಿಲ್ಲ ಎಂದು ಸಿಂಘಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್-ರಷ್ಯಾ ಸಂಘರ್ಷದ ಪರಿಣಾಮ: ಬ್ಯಾರೆಲ್ಗೆ $100 ಗಡಿ ದಾಟಿದ ಕಚ್ಚಾ ತೈಲ
ಹೀಗಾಗಿ, ಹೂಡಿಕೆದಾರರು ಕಾದು ನೋಡಬೇಕು ಮತ್ತು ಹೊಸ ಹೂಡಿಕೆಗಳಿಂದ ದೂರವಿರಬೇಕು. ಇದೇ ಸಮಯದಲ್ಲಿ ತಮ್ಮ ಬಂಡವಾಳ ಹಿಡಿದಿಟ್ಟುಕೊಳ್ಳಬೇಕು ಮತ್ತು ಗಾಬರಿ ಮಾರಾಟದ ಮಾರ್ಗವನ್ನು ಅನುಸರಿಸಬಾರದು ಎಂದು ಸಿಂಘಾಲ್ ಹೇಳಿದ್ದಾರೆ.
ಹೆಚ್ಚಿನ ಕಚ್ಚಾ ತೈಲ ಬೆಲೆಗಳು ಅದರ ಚಾಲ್ತಿ ಖಾತೆ ಕೊರತೆ ಹೆಚ್ಚಿಸುವ ಮೂಲಕ ಭಾರತೀಯ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಬಹುದು. ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ (INR) ಮೌಲ್ಯದ ಮೇಲೆ ಒತ್ತಡ ಉಂಟುಮಾಡಬಹುದು. ಹಣದುಬ್ಬರವೂ ಹೆಚ್ಚಾಗಬಹುದು. ಕಚ್ಚಾ ತೈಲದಲ್ಲಿ ಶೇಕಡಾ 10 ರಷ್ಟು ಹೆಚ್ಚಳವು ಭಾರತದಲ್ಲಿ ಸಗಟು ಬೆಲೆ ಸೂಚ್ಯಂಕದಲ್ಲಿ (WPI) ಸುಮಾರು ಶೇ. 0.9 ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ CPI ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಬಗ್ಗೆ ಸಿಂಗ್ ಮಾತನಾಡಿದರು.