ETV Bharat / business

ಫ್ಲಿಪ್​ಕಾರ್ಟ್​​ನಲ್ಲಿ ಸಿಗಲಿದೆ ನೋಕಿಯಾ, ಮೊಟೊರೊಲಾ ಸ್ಮಾರ್ಟ್​ ಟಿವಿ... ಹೇಗಿರಲಿದೆ ಫೀಚರ್​ & ಬೆಲೆ​? - Flipkart

ಮೊಬೈಲ್​ ಉತ್ಪನ್ನಗಳ ಮೂಲಕ ಈ ಹಿಂದೆ ಸಾಕಷ್ಟು ಖ್ಯಾತಿ ಗಳಿಸಿದ್ದ ನೋಕಿಯಾ ಭಾರತದಲ್ಲಿ ಟೆಲಿವಿಷನ್ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದೆ. 'ಮೇಕ್ ಇನ್ ಇಂಡಿಯಾ' ಅಭಿಯಾನದ ಭಾಗವಾಗಿ ಫ್ಲಿಪ್​ಕಾರ್ಟ್-​ ನೋಕಿಯಾ ಸ್ಮಾರ್ಟ್ ಟಿವಿಗಳ ಉತ್ಪಾದನೆ ಮತ್ತು ವಿತರಣೆಯಡಿ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸಲಿವೆ.

ನೋಕಿಯಾ
author img

By

Published : Nov 7, 2019, 8:00 AM IST

ನವದೆಹಲಿ: ಭಾರತದಲ್ಲಿ ನೋಕಿಯಾ ಬ್ರಾಂಡ್​​ನ ಸ್ಮಾರ್ಟ್ ಟಿವಿಗಳ ಮಾರಾಟ ಆರಂಭಿಸಲು ನೋಕಿಯಾದೊಂದಿಗೆ ಮಾರುಕಟ್ಟೆ ಕಾರ್ಯತಂತ್ರದ ಸಹಭಾಗಿತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಫ್ಲಿಪ್​ಕಾರ್ಟ್ ತಿಳಿಸಿದೆ.

ಮೊಬೈಲ್​ ಉತ್ಪನ್ನಗಳ ಮೂಲಕ ಈ ಹಿಂದೆ ಸಾಕಷ್ಟು ಖ್ಯಾತಿ ಗಳಿಸಿದ್ದ ನೋಕಿಯಾ ಭಾರತದಲ್ಲಿ ಟೆಲಿವಿಷನ್ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದೆ. 'ಮೇಕ್ ಇನ್ ಇಂಡಿಯಾ' ಅಭಿಯಾನದ ಭಾಗವಾಗಿ ಫ್ಲಿಪ್​ಕಾರ್ಟ್-​ ನೋಕಿಯಾ ಸ್ಮಾರ್ಟ್ ಟಿವಿಗಳ ಉತ್ಪಾದನೆ ಮಾಡಲಾಗಿದೆ. ಈ ಮೂಲಕ ಸಾವಿರಾರು ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ. ನೋಕಿಯಾ ಬ್ರಾಂಡ್ ಸ್ಮಾರ್ಟ್ ಟಿವಿಗಳು ಜೆಬಿಎಲ್​ನಿಂದ ಸೌಂಡ್ ಸಿಸ್ಟಮ್ ಲಭ್ಯವಾಗಲಿದೆ.

ನೋಕಿಯಾ ಬ್ರಾಂಡ್ ಸ್ಮಾರ್ಟ್ ಟಿವಿಗಳನ್ನು ಇ - ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಯಾವಾಗ ಬಿಡುಗಡೆ ಮಾಡಲಾಗುವುದು ಎಂದು ಫ್ಲಿಪ್‌ಕಾರ್ಟ್ ಬಹಿರಂಗಪಡಿಸುವುದಿಲ್ಲ. ಟಿವಿ ಮಾರುಕಟ್ಟೆ ವಿಭಾಗದಲ್ಲಿ ತನ್ನ ಅಸ್ತಿತ್ವ ಬಲಪಡಿಸಲು ಮೆಟ್ರೊ, ಟೈಯರ್​-2 ಮತ್ತು ಟೈಯರ್​- 3 ನಗರಗಳತ್ತ ದೃಷ್ಟಿ ಹಾಯಿಸಿದೆ.

ಭಾರತದಲ್ಲಿ ಸ್ಥಳೀಯವಾಗಿ ತಯಾರಿಸಿದ ಸ್ಮಾರ್ಟ್ ಟಿವಿಗಳನ್ನು ಆರಂಭಿಸಲು ಫ್ಲಿಪ್‌ಕಾರ್ಟ್- ಮೊಟೊರೊಲಾ ಜೊತೆ ಇದೇ ರೀತಿಯ ಪಾಲುದಾರಿಕೆ ಒಪ್ಪಂದ ಮಾಡಿಕೊಂಡ ಕೆಲವು ವಾರಗಳ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ. ಮೊಟೊರೊಲಾ ಸ್ಮಾರ್ಟ್ ಟಿವಿಗಳು ಫ್ಲಿಪ್‌ಕಾರ್ಟ್​ನಲ್ಲಿ ಆರಂಭಿಕ ಬೆಲೆ ₹ 13,999 ದಿಂದ ಶುರುವಾಗಲಿದೆ.

ಸ್ಮಾರ್ಟ್ ಟಿವಿ ಸರಣಿಯು 33 -ಇಂಚು, 50- ಇಂಚು ಮತ್ತು 55- ಇಂಚಿನ ಯುಎಚ್‌ಡಿ ಮಾದರಿ ಹಾಗೂ ಯುಹೆಚ್‌ಡಿ ಪ್ಯಾನೆಲ್‌ನೊಂದಿಗೆ ಪ್ರೀಮಿಯಂ 65 ಇಂಚಿನ ಟಿವಿಯನ್ನು ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಮಾದರಿಯ ಬೆಲೆಯು 64,999 ರೂ. ಆಗಿರಲಿದೆ. ಇದರಲ್ಲಿ ಎಂಇಎಂಸಿ ತಂತ್ರಜ್ಞಾನ ಮತ್ತು ಎಚ್‌ಡಿಆರ್ ಟೆಕ್ನಾಲಜಿ ಅಳವಡಿಸಲಾಗಿಸದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.