ನವದೆಹಲಿ: ನಾಲ್ಕು ರಾಜ್ಯಗಳು ಚುನಾವಣೆ ಮತ್ತು ಸ್ಥಿರ ಜಾಗತಿಕ ತೈಲ ಮಾರುಕಟ್ಟೆಯಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್‌ನ ಪಂಪ್ ಬೆಲೆಯಲ್ಲಿ ಹೆಚ್ಚಳ ಮಾಡದಂತೆ ಯಥಾವತ್ತಾಗಿ ಉಳಿಸಿಕೊಂಡಿವೆ.
ರಾಜಧಾನಿಯಲ್ಲಿ ಬುಧವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 91.17 ಮತ್ತು ಡೀಸೆಲ್ ದರ 81.47 ರೂ.ಯಲ್ಲಿ ಮಾರಾಟ ಆಗುತ್ತಿದೆ. ಜಾಗತಿಕ ಉತ್ಪನ್ನದ ಬೆಲೆಗಳು ಏರಿಕೆಯಾಗಿದ್ದರೂ 11 ದಿನಗಳವರೆಗೆ ಇಂಧನ ಬೆಲೆಗಳನ್ನು ಪರಿಷ್ಕರಣೆ ಮಾಡಿಲ್ಲ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬದಲಾಗದೆ ಉಳಿದಿದೆ. ಆದರೆ ಈ ವಿರಾಮವು ದೇಶದ ಹಲವು ಭಾಗಗಳಲ್ಲಿ ಲೀಟರ್‌ಗೆ 100 ರೂ. (ಪೆಟ್ರೋಲ್) ದಾಟಿದ ಇಂಧನ ಬೆಲೆಯನ್ನು ತಗ್ಗಿಸಲು ನೆರವಾಗಿಲ್ಲ.
ಫೆಬ್ರವರಿ ಆರಂಭದಿಂದಲೂ ಕಚ್ಚಾ ಬ್ಯಾರೆಲ್‌ಗೆ 7 ಡಾಲರ್ಗಿಂತ ಹೆಚ್ಚು ಏರಿಕೆಯಾಗಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್‌ಗೆ 4.22 ರೂ. ಮತ್ತು ಡೀಸೆಲ್‌ಗೆ 4.34 ರೂ.ಯಷ್ಟು ಹೆಚ್ಚಳವಾಗಿದೆ. ಕಚ್ಚಾ ತೈಲ ಈಗ ಬ್ಯಾರೆಲ್‌ಗೆ 67 ಡಾಲರ್ಗಿಂತ ಕಡಿಮೆಯಾಗಿದೆ.
ಇದನ್ನೂ ಓದಿ: ಗಂಟೆಗೆ 75,000 ಕೋಟಿ ರೂ. ಗಳಿಸಿದ್ರೂ ಮಸ್ಕ್ಗೆ ಧಕ್ಕಲಿಲ್ಲ ವಿಶ್ವದ ನಂ.1 ಶ್ರೀಮಂತ ಪಟ್ಟ: ಏಕೆ ಗೊತ್ತೇ?
ಹಿಂದಿನ ವಾರಗಳಲ್ಲಿನ ಹೆಚ್ಚಳದಿಂದಾಗಿ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 100 ರೂ.ಗೆ ತಲುಪಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 2021ರಲ್ಲಿ 26 ಬಾರಿ ಹೆಚ್ಚಾಗಿದ್ದು, ಈ ಎರಡೂ ಆಟೋ ಇಂಧನಗಳು ಈ ವರ್ಷ ಇಲ್ಲಿಯವರೆಗೆ ಕ್ರಮವಾಗಿ 7.46 ರೂ. ಮತ್ತು 7.60 ರೂ. ಏರಿಕೆ ಕಂಡಿವೆ.