ETV Bharat / business

ಬ್ಯಾಂಕಿಂಗ್​ ವಲಯದಲ್ಲಿ ಇಂದಿನಿಂದ ಮಹತ್ವದ ಬದಲಾವಣೆ: ಡೆಬಿಟ್‌​, ಕ್ರೆಡಿಟ್​ ಕಾರ್ಡ್ ಮೇಲೂ ನಿರ್ಬಂಧ

ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಸೇರಿದಂತೆ ಇಂದಿನಿಂದ ಬ್ಯಾಂಕಿಂಗ್​ ವಲಯದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಈ ವಿಚಾರಗಳು ನಿಮಗೆ ತಿಳಿದಿರಲಿ..

RBI New rules
RBI New rules
author img

By

Published : Oct 1, 2021, 4:00 PM IST

ಹೈದರಾಬಾದ್​: ಬ್ಯಾಂಕಿಂಗ್​ ವಲಯದಲ್ಲಿ ಇಂದಿನಿಂದ ಮಹತ್ವದ ಬದಲಾವಣೆಗಳಾಗಿವೆ. ಭಾರತೀಯ ರಿಸರ್ವ್‌​ ಬ್ಯಾಂಕ್​ನ ಈ ಹೊಸ ನಿಯಮಗಳು ಇಂದಿನಿಂದಲೇ ಜಾರಿಯಾಗಿವೆ. ಪ್ರಮುಖವಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೇಲೂ ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ.

RBI
ಭಾರತೀಯ ರಿಸರ್ವ್ ಬ್ಯಾಂಕ್​

1. ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಅಥವಾ ಮೊಬೈಲ್‌ ವ್ಯಾಲೆಟ್‌ ಬಳಸಿ ಆಟೋ - ಡೆಬಿಟ್‌ ಪೇಮೆಂಟ್‌ ವ್ಯವಸ್ಥೆ ಮಾಡುವುದಿದ್ದರೆ ಬ್ಯಾಂಕ್‌ಗಳು 24 ಗಂಟೆ ಮೊದಲು ಗ್ರಾಹಕರಿಗೆ ಸೂಚನೆ ನೀಡಬೇಕಾಗುತ್ತದೆ. ಗ್ರಾಹಕರು ಒಪ್ಪಿಗೆ ನೀಡಿದ ಬಳಿಕವೇ ಹಣ ಕಡಿತವಾಗಲಿದೆ. 5,000 ರೂ.ಗಿಂತಲೂ ಮೇಲ್ಪಟ್ಟ ಮೊತ್ತದ ಕಡಿತಕ್ಕೆ ಇದು ಅನ್ವಯ.

2. ಆಟೋ ಡೆಬಿಟ್​ ಪಾವತಿ ವ್ಯವಸ್ಥೆ ಅಡಿಯಲ್ಲಿ ಬ್ಯಾಂಕ್​ಗಳು ಡಿಜಿಟಲ್​​ ಪ್ಲಾಟ್​ಫಾರ್ಮ್/​ ಸ್ವಯಂಚಾಲಿತ ಬಿಲ್​ ಪಾವತಿಗೆ ಹಣ ಡೆಬಿಟ್​ ಮಾಡುವ ಮೊದಲು ಅನುಮತಿ ಪಡೆದುಕೊಳ್ಳಬೇಕು. ನೆಟ್​​ಫ್ಲಿಕ್ಸ್​​​, ಅಮೆಜಾನ್ ಪ್ರೈಮ್‌ನಂತಹ ಮಾಸಿಕ ಸ್ವಯಂ-ಡೆಬಿಟ್ ವಹಿವಾಟು ಚಂದಾದಾರರು ಗ್ರಾಹಕರ ಅನುಮತಿ ಇಲ್ಲದೇ ಹಣ ಪಡೆದುಕೊಳ್ಳುವಂತಿಲ್ಲ. ಎಸ್‌ಎಂಎಸ್‌ (SMS) ಅಥವಾ ಇ-ಮೇಲ್ ರೂಪದಲ್ಲಿ ನಮಗೆ ಮೊದಲೇ ಸಂದೇಶ ಕಳುಹಿಸಬೇಕು.

3. ಟ್ರೇಡಿಂಗ್​ ಖಾತೆಗಳಿಗೆ ಕೆವೈಸಿ ನಿಯಮ

ಟ್ರೇಡಿಂಗ್​ ಅಕೌಂಟ್​ ಹೊಡಿಕೆದಾರರಿಗೆ ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಇದರಲ್ಲಿ ವಿಳಾಸ, ಹೆಸರು, ಪ್ಯಾನ್​, ಮೊಬೈಲ್​ ಸಂಖ್ಯೆ ಹಾಗೂ ಇ-ಮೇಲ್​​ ಐಡಿ ಕಡ್ಡಾಯ. ಇದರ ಜೊತೆಗೆ, ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್​ಗಳಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಹಳೆಯ ಚೆಕ್​ ಬುಕ್​​​ ಕೊನೆಗೊಳಿಸಿದೆ.

4. ಪಿಂಚಣಿ ನಿಯಮದಲ್ಲೂ ಬದಲಾವಣೆ ಆಗಿದೆ. ಇದು 80 ವರ್ಷಕ್ಕಿಂತಲೂ ಮೆಲ್ಪಟ್ಟವರಿಗೆ ಅನ್ವಯವಾ. 80 ವರ್ಷಕ್ಕಿಂತ ಮೇಲ್ಪಟ್ಟ ಪಿಂಚಣಿದಾರರು ದೇಶದ ಎಲ್ಲ ಅಂಚೆ ಕಚೇರಿಗಳಲ್ಲಿ ಡಿಜಿಟಲ್​ ಜೀವನ ಪ್ರಮಾಣ ಪತ್ರ ಸಲ್ಲಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.