ನವದೆಹಲಿ: ಭಾರತದ ಅತಿ ದೊಡ್ಡ ಕಾರ್ ಉತ್ಪಾದಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ''ಸಿಯಾಜ್ ಎಸ್'' ಎಂಬ ಹೊಸ ಆವೃತ್ತಿಯ ಕಾರನ್ನು ಇಂದು ಬಿಡುಗಡೆ ಮಾಡಿದೆ.
ಅಲ್ಲದೇ ಕಂಪನಿ ಬಿಎಸ್-6 ಕಂಪ್ಲೈಂಟ್ ಸಿಯಾಜ್ ಅನ್ನು ಸರಿಸುಮಾರು 8.31 ಲಕ್ಷದಿಂದ 11.09 ಲಕ್ಷ ರೂ.ಗಳ ಮೊತ್ತದಲ್ಲಿ ಪರಿಚಯಿಸಿದೆ ಎಂದು ಕಂಪನಿ ತಿಳಿಸಿದೆ. ಇದು ಏಪ್ರಿಲ್ 1ರಿಂದ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕಠಿಣ ಹೊರಸೂಸುವಿಕೆಯ ಮಾನದಂಡವನ್ನು ಅನುಸರಿಸುವ ಕಾರಾಗಿರುವುದು ವಿಶೇಷ.
ಶೇಕಡಾ 29ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಸಿಯಾಜ್, ವಾಹನದ ಪ್ರತಿ ಬಿಡಿಭಾಗಗಳು, ಅದರ ಉತ್ತಮ ಕಾರ್ಯಕ್ಷಮತೆಗೆ ಜನಪ್ರಿಯವಾಗಿದೆ.
ಸಿಯಾಜ್ ಎಸ್ ಗ್ರಾಹಕರ ಅಗತ್ಯತೆಯನ್ನು ಪೂರೈಸಲಿದ್ದು, ಗ್ರಾಹಕರನ್ನು ಹೆಚ್ಚು ಆಕರ್ಷಿಸಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಯಾಜ್ ಎಸ್ ಸಿಗ್ನೇಚರ್ ಡ್ಯುಯಲ್-ಟೋನ್ ಸ್ಪೋರ್ಟಿ ಹೊರಭಾಗಗಳು ಮತ್ತು ಉತ್ತಮ ಗಾಡಿ ಬಿಡಿ ಭಾಗಗಳೊಂದಿಗೆ ಬರಲಿದೆಯೆಂದು ಎಂದು ಕಂಪನಿ ತಿಳಿಸಿದೆ. ಇದು ಸಂಯೋಜಿತ ಡಾರ್ಕ್ ಫಿನಿಶ್‌ನಲ್ಲಿ ಮಲ್ಟಿ-ಸ್ಪೋಕ್ 16 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ.