ನವದೆಹಲಿ: ಭಾರತದ ಮಾರುಕಟ್ಟೆ ಬಂಡವಾಳದಿಂದ ಜಿಡಿಪಿ (ಎಂ-ಕ್ಯಾಪ್ ಟು ಜಿಡಿಪಿ) ಅನುಪಾತವು 2009-10ನೇ ಹಣಕಾಸು ವರ್ಷದಿಂದ ಪ್ರಸ್ತುತ ವರ್ಷದಲ್ಲಿ ಅತ್ಯಧಿಕವಾಗಿದೆ ಎಂದು ಮೋತಿಲಾಲ್ ಓಸ್ವಾಲ್ ಇನ್ಸ್ಟಿಟ್ಯೂಷನಲ್ ಇಕ್ವಿಟೀಸ್ ವರದಿ ತಿಳಿಸಿದೆ.
ಮಾರುಕಟ್ಟೆ ಕ್ಯಾಪ್-ಟು-ಜಿಡಿಪಿ ಅನುಪಾತವು ಬಾಷ್ಪಶೀಲವಾಗಿದೆ (ವಲಾಟೈಲ್) ಎಂದು ಮೋತಿಲಾಲ್ ಓಸ್ವಾಲ್ ತನ್ನ 'ಇಂಡಿಯಾ ಸ್ಟ್ರಾಟಜಿ' ವರದಿಯಲ್ಲಿ ಉಲ್ಲೇಖಿಸಿದೆ.
2019ರ ಹಣಕಾಸು ವರ್ಷದಲ್ಲಿನ ಶೇ 79 ರಿಂದ 2020 ಹಣಕಾಸು ವರ್ಷದಲ್ಲಿ ಶೇ 56ಕ್ಕೆ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಶೇ 91ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.
ಜೂನ್ 20ರ ನಂತರದ ಚೇತರಿಕೆಯು 2010ರ ಹಣಕಾಸು ವರ್ಷದ ಬಳಿಕದ ಅತ್ಯಧಿಕ ಮಟ್ಟದಲ್ಲಿ ಮೆ-ಕ್ಯಾಪ್ / ಜಿಡಿಪಿ ಅನುಪಾತ ಏರಿಕೆ ಕಾರಣವಾಗಿದೆ. ಕಳೆದ ಎರಡು ದಶಕಗಳಲ್ಲಿ ಅತ್ಯಂತ ಕಡಿಮೆ ಮಟ್ಟವು 2004ರ ಆರ್ಥಿಕ ವರ್ಷದಲ್ಲಿ ಶೇ 42ರಷ್ಟಿತ್ತು. ಈ ಅನುಪಾತವು 2003-08ರ ಷೇರು ಪೇಟೆ ಓಟದಿಂದಾಗಿ 2007ರ ಡಿಸೆಂಬರ್‌ನಲ್ಲಿ ಶೇ 149ರ ಗರಿಷ್ಠ ಮಟ್ಟ ತಲುಪಿತ್ತು.
ನಿಫ್ಟಿ 50 ಮಾರುಕಟ್ಟೆ ವಿಭಾಗದ ಬಂಡವಾಳವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಮುಂದುವರೆಸಿದೆ. ನಿಫ್ಟಿ ಎಂ-ಕ್ಯಾಪ್ 2019ರ ಡಿಸೆಂಬರ್ ಮಟ್ಟಕ್ಕಿಂತ 13 ಶೇರಷ್ಟು ಹೆಚ್ಚಾಗಿದೆ.