ನವದೆಹಲಿ: ಎಲ್ಐಸಿ ಹೌಸಿಂಗ್ ಫೈನಾನ್ಸ್ ಕಂಪನಿಯು ತನ್ನ ಮಾತೃ ಸಂಸ್ಥೆ ಸಾರ್ವಜನಿಕ ರಂಗದ ಪ್ರಮುಖ ಜೀವ ವಿಮಾ ಕಂಪನಿಯಾಗಿರುವ ಎಲ್ಐಸಿಗೆ 4.5 ಕೋಟಿ ಷೇರುಗಳ ಹಂಚಿಕೆ ಮಾಡುವ ಪ್ರಸ್ತಾಪ ಸಂಬಂಧ ಸೆಕ್ಯುರಿಟೀಸ್ ಅಪೆಲೇಟ್ ಟ್ರಿಬ್ಯುನಲ್ (ಎಸ್ಎಟಿ) ಕದತಟ್ಟಿದೆ.
LICಯು 4.54 ಈಕ್ವಿಟಿ ಷೇರುಗಳ ಹಂಚಿಕೆ ಮಾಡಲು ಆದ್ಯತೆಯ ಮೇರೆಗೆ ಪ್ರತಿ ಷೇರಿನ ಬೆಲೆಯನ್ನ 514.25ರೂ. ಗೆ ನಿಗದಿ ಮಾಡಿರುವುದು ಹೇಗೆ ಎಂಬ ಕುರಿತು ವಿವರಿಸುವಂತೆ ಎಲ್ಐಸಿಹೆಚ್ಎಫ್ ಕೋರಿದೆ.
ಅಲ್ಲದೇ ಷೇರು ವಿನಿಯಮಗಳಾದ BSE ಮತ್ತು NSEಗಳು ಕಂಪನಿ ನೀಡಲು ಪ್ರಸ್ತಾಪಿತವಾದ 2.334.70 ಕೋಟಿ ರೂ.ಗಳ ಷೇರುಗಳನ್ನು ಪರಿಶೀಲಿಸುತ್ತಿವೆ. ಜೊತೆಗೆ ಹೆಚ್ಚುವರಿಯಾಗಿ ಆದ್ಯತೆಯ ಷೇರುಗಳನ್ನ ನೀಡಬೇಕಿದೆ ಎಂದು ಪ್ರಸ್ತಾಪಿಸಿವೆ.
ಎಲ್ಐಸಿಗೆ ಈಕ್ವಿಟಿ ಷೇರುಗಳ ಆದ್ಯತೆಯ ವಿತರಣೆಯ ಬೆಲೆಯನ್ನು ನಿಗದಿ ಮಾಡುವ ವಿಧಾನಕ್ಕೆ ಸಂಬಂಧಿಸಿದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ (ಎಒಎ) ನಿಬಂಧನೆಗಳ ಬಗ್ಗೆ ಸ್ಟಾಕ್ ಎಕ್ಸ್ಚೇಂಜ್ ಕಂಪನಿಯನ್ನು ಕೇಳಿದೆ ಎಂದು ಎಲ್ಐಸಿ ಹೌಸಿಂಗ್ ಫೈನಾನ್ಸ್ ತಿಳಿಸಿದೆ. ಆದರೆ, ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ಅಡಿಯ ನಿಬಂಧನೆಗಳಿಗೆ ಅನುಸಾರವಾಗಿಯೇ ಷೇರುಗಳ ಬೆಲೆ ನಿರ್ಧಾರವಾಗಿದೆ ಎಂದು ಎಲ್ಐಸಿಹೆಚ್ಎಫ್ ಬಿಎಸ್ಇ ಮತ್ತು ಎನ್ಎಸ್ಇಗೆ ಮಾಹಿತಿ ನೀಡಿದೆ.
ಈ ಷೇರು ವಿತರಣಾ ಬೆಲೆ ಸಂಬಂಧ ಸಭೆಯಲ್ಲಿ ಮಾತನಾಡಿದ್ದ ಎಲ್ಐಸಿ ಅಧ್ಯಕ್ಷ ಎಂ.ಆರ್ ಕುಮಾರ್, ಈಕ್ವಿಟಿ ಷೇರಿನ ವಿತರಣಾ ಬೆಲೆಯನ್ನು ನೋಟಿಸ್ನಲ್ಲಿ ತಲಾ 514.25 ಎಂದು ನಮೂದಿಸಲಾಗಿದೆ. ಆದರೆ 4.5 ಕೋಟಿ ಷೇರಿಗೆ ಒಟ್ಟಾರೆ ತಲಾ 514.43 ರೂ.ನಂತೆ 2,335.51 ಕೋಟಿ ರೂ. ಆಗಲಿದೆ ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ಶೇ.100ರಷ್ಟು ಸರ್ಕಾರಿ ಪಾಲುದಾರಿಕೆಯ ಸಂಸ್ಥೆಯನ್ನ ಸ್ಟಾಕ್ ಎಕ್ಸ್ಚೇಂಜ್ ವೇದಿಕೆಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ ಇದಕ್ಕಾಗಿ ಪೂರ್ವ ತಯಾರಿ ಕಾರ್ಯಗಳು ಅಂತಿಮ ಹಂತ ತಲುಪಿದೆ.