ETV Bharat / business

'ಲಾವಾ' ಮೇಡ್​ ಇನ್ ಇಂಡಿಯಾ ಸ್ಮಾರ್ಟ್​ಫೋನ್ ಲಾಂಚ್.. ಇಷ್ಟೊಂದು ಕಡಿಮೆ ದರಕ್ಕೆ ಸಿಗುವುದು ಕನಸಿನ ಮಾತು​!

author img

By

Published : Dec 29, 2020, 12:33 PM IST

ಸ್ಮಾರ್ಟ್‌ಫೋನ್ ಎಂಜಿನಿಯರಿಂಗ್ ಈ ಹಿಂದೆ ಈ ರೀತಿಯಾಗಿ ವಿಕಸನಗೊಂಡಿಲ್ಲ ಮತ್ತು ಕ್ರಿಯಾತ್ಮಕವಾಗಿ ಇರಲಿಲ್ಲ. ನಮ್ಮ ಪ್ರತಿಭಾವಂತ ಎಂಜಿನಿಯರ್‌ಗಳಿಗೆ ಧನ್ಯವಾದಗಳು. ತಯಾರಿಕೆಯ ಇತಿಹಾಸದ ಲೈವ್ ವೆಬ್‌ಕಾಸ್ಟ್‌ ಮಾಡುತ್ತಿದ್ದೇವೆ..

Lava Mobiles
ಲಾವಾ ಮೊಬೈಲ್

ನವದೆಹಲಿ : ಭಾರತೀಯ ಸ್ಮಾರ್ಟ್​​ಫೋನ್ ಸಂಸ್ಥೆಯಾದ ಲಾವಾ ಇಂಟರ್​ ನ್ಯಾಷನಲ್ ಕಂಪನಿ ಜನವರಿ 7ರಂದು ವರ್ಚುವಲ್ ಕಾರ್ಯಕ್ರಮಕ್ಕೆ ಸಿದ್ಧವಾಗುವಂತೆ ಮೊಬೈಲ್​ ಪ್ರಿಯರಿಗೆ ಆಹ್ವಾನ ಕಳುಹಿಸಿದ್ದು, ಅಂದು ಹೊಸ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡಲಿದೆ.

ಮುಂಬರುವ ಸ್ಮಾರ್ಟ್‌ಫೋನ್‌ಗಳು ವಿಕಸನ ಮತ್ತು ಡೈನಾಮಿಕ್ ಎಂಜಿನಿಯರಿಂಗ್ ಫೀಚರ್​ ಹೊಂದಿರುತ್ತವೆ ಎಂದು ಕಂಪನಿ ಹಂಚಿಕೊಂಡ ಟೀಸರ್‌ನಲ್ಲಿ ಬಹಿರಂಗಪಡಿಸಿದೆ. ಸ್ಮಾರ್ಟ್‌ಫೋನ್ ​ ಉದ್ಯಮದಲ್ಲಿ ಹಿಂದೆಂದೂ ನಡೆಯದಂತಹ ಘೋಷಣೆಯನ್ನು ನಾವು ಮಾಡುತ್ತಿದ್ದೇವೆ. ಈ ಸಾಧನವನ್ನು ಸ್ಥಳೀಯವಾಗಿ ತಯಾರಿಸಲಾಗಿದೆ ಎಂದು ಟ್ವಿಟರ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಲಾವಾ ಮೊಬೈಲ್ಸ್‌ನ ಅಧ್ಯಕ್ಷ ಮತ್ತು ವ್ಯವಹಾರ ಮುಖ್ಯಸ್ಥ ಸುನಿಲ್ ರೈನಾ ಹೇಳಿದ್ದಾರೆ.

ಇದನ್ನೂ ಓದಿ: ಮುನ್ನುಗ್ಗುತ್ತಿದೆ ಗೂಳಿ: ದಿನ ದಿನವೂ ಸೆನ್ಸೆಕ್ಸ್​ ಹೊಸ ಎತ್ತರಕ್ಕೆ ಜಿಗಿತ

ಸ್ಮಾರ್ಟ್‌ಫೋನ್ ಎಂಜಿನಿಯರಿಂಗ್ ಈ ಹಿಂದೆ ಈ ರೀತಿಯಾಗಿ ವಿಕಸನಗೊಂಡಿಲ್ಲ ಮತ್ತು ಕ್ರಿಯಾತ್ಮಕವಾಗಿ ಇರಲಿಲ್ಲ. ನಮ್ಮ ಪ್ರತಿಭಾವಂತ ಎಂಜಿನಿಯರ್‌ಗಳಿಗೆ ಧನ್ಯವಾದಗಳು. ತಯಾರಿಕೆಯ ಇತಿಹಾಸದ ಲೈವ್ ವೆಬ್‌ಕಾಸ್ಟ್‌ ಮಾಡುತ್ತಿದ್ದೇವೆ ಎಂದರು.

ಲಾವಾ ಬಿಯು ಬೆಲೆ : ಲಾವಾ ತನ್ನ ಬಿಯು ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಡಿಸೆಂಬರ್ 23ರಂದು ಟ್ವೀಟ್ ಮೂಲಕ ತಿಳಿಸಿತ್ತು. ಡ್ಯುಯಲ್ ರಿಯರ್ ಕ್ಯಾಮೆರಾ ಫೀಚರ್​ ಇರುವುದನ್ನು ಕೂಡ ಘೋಷಿಸಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಈ ಹ್ಯಾಂಡ್‌ಸೆಟ್‌ನ ಬೆಲೆ ಸಿಂಗಲ್ 2ಜಿಬಿ 32ಜಿಬಿ ಸ್ಟೋರೇಜ್​ಗೆ 6,888 ರೂ. ಎಂದು ಸಂಸ್ಥೆಯು ಈಗಾಗಲೇ ಬಹಿರಂಗಪಡಿಸಿದೆ. ಫೋನ್‌ನ ಈಗಾಗಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ. ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ರೋಸ್ ಪಿಂಕ್ ಬಣ್ಣದಲ್ಲಿ ತಯಾರಿಸಿದೆ.

ಲಾವಾ ಬಿಯು ಜೊತೆಗೆ ಜನವರಿ 7ರಂದು ನಾಲ್ಕು ಹೊಸ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಫಿಟ್‌ನೆಸ್ ಬ್ಯಾಂಡ್ ಬಿಡುಗಡೆ ಮಾಡಲು ಸಂಸ್ಥೆ ಯೋಜಿಸುತ್ತಿದೆ. ಹೊಸ ಸ್ಮಾರ್ಟ್‌ಫೋನ್‌ಗಳ ಬೆಲೆ ₹5,000 ದಿಂದ ₹15,000ರ ನಡುವೆ ಇರಲಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಲಭ್ಯವಾಗಲಿದೆ ಎಂದು ಸಂಸ್ಥೆಯೊಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.