ETV Bharat / business

ವೊಡಾಫೋನ್ ಐಡಿಯಾದ ಪಾಲನ್ನು ಸರ್ಕಾರಕ್ಕೆ ನೀಡಲು ಮುಂದಾದ ಕೆ ಎಂ ಬಿರ್ಲಾ ; ಮುಂದೇನು? - ವೊಡಾಫೋನ್ ಐಡಿಯಾ ಸುದ್ದಿ

ಹೂಡಿಕೆದಾರರು ಕೂಡ ಈ ವಿಷಯಗಳ ಬಗ್ಗೆ ಸ್ಪಷ್ಟತೆ ಕೋರಿದ್ದಾರೆ ಎಂದು ಅವರು ಹೇಳಿದ್ದಾರೆ. ಕಂಪನಿಯನ್ನು ಉಳಿಸಲು ಮತ್ತು ನಮ್ಮ ಖಾಸಗಿ ಹಿತಾಸಕ್ತಿ ಪರಿಗಣಿಸದೆ ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ತುರ್ತಾಗಿ ಅನ್ವೇಷಿಸಲು ಸರ್ಕಾರದೊಂದಿಗೆ ಕೆಲಸ ಮಾಡಲು ತಾನು ಹಾಗೂ ತಮ್ಮ ತಂಡವು ಹೆಚ್ಚು ಸಂತೋಷಡುತ್ತದೆ ಎಂದು ಬಿರ್ಲಾ ಹೇಳಿದ್ದಾರೆ..

K M Birla offers his stake to govt: What's next for Vodafone Idea
ವೊಡಾಫೋನ್ ಐಡಿಯಾದಲ್ಲಿ ಪಾಲವನ್ನು ಸರ್ಕಾರಕ್ಕೆ ನೀಡಲು ಮುಂದಾದ ಕೆ.ಎಂ.ಬಿರ್ಲಾ; ಈ ಟೆಲಿಕಾಂ ಸಂಸ್ಥೆಗಳ ಮುಂದಿನ ಕಥೆ ಏನು..?
author img

By

Published : Aug 3, 2021, 9:57 PM IST

ನವದೆಹಲಿ : ವೊಡಾಫೋನ್ ಐಡಿಯಾಗೆ ಸಂಕಷ್ಟ ಎದುರಾಗಿದೆ. ಉತ್ತೇಜಕರಾದ ಕುಮಾರ್ ಮಂಗಳಂ ಬಿರ್ಲಾ ತನ್ನ ಪಾಲನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಮುಂದಾಗಿದ್ದಾರೆ. ಈಗ ವಿಷಯ ಮೋದಿ ಸರ್ಕಾರದ ಅಂಗಳಕ್ಕೆ ಬಂದಿದೆ. ಈಗಾಗಲೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಬಿಎಸ್‌ಎನ್‌ಎಲ್‌ನೊಂದಿಗೆ ವಿಲೀನಗೊಳಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಬಿರ್ಲಾ ಅವರು ಈಗಾಗಲೇ ತಮ್ಮ ಇಕ್ವಿಟಿಯ ಮಾರಾಟ ಪ್ರಕ್ರಿಯೆಗೆ ಆಹ್ವಾನ ನೀಡಿದ್ದಾರೆ.

ಸದ್ಯ ಈ ವಿಷಯ ಇನ್ನೂ ಸ್ಪಷ್ಟವಾಗಿಲ್ಲ. ಅಂತಿಮ ನಿರ್ಧಾರ ಹೊರಬೀಳುವವರೆಗೂ ವೊಡಾಫೋನ್ ಐಡಿಯಾದ ಸುತ್ತ ಸಾಕಷ್ಟು ಅನಿಶ್ಚಿತತೆ ಇರುತ್ತದೆ. ಚೆಂಡು ಈಗ ಸರ್ಕಾರದ ಅಂಗಳದಲ್ಲಿದೆ. ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರು ಕ್ಯಾಬಿನೆಟ್ ಕಾರ್ಯದರ್ಶಿಗೆ ಪತ್ರ ಬರೆದು ವೊಡಾಫೋನ್-ಐಡಿಯಾದಲ್ಲಿನ ತನ್ನ ಪಾಲನ್ನು ಯಾವುದೇ ಸರ್ಕಾರಿ ಸಂಸ್ಥೆಗೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.

ಜೂನ್ 7ರಂದು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾಗೆ ಬರೆದ ಪತ್ರದಲ್ಲಿ, ವೊಡಾಫೋನ್ ಐಡಿಯಾದೊಂದಿಗೆ ಸಂಪರ್ಕ ಹೊಂದಿರುವ 27 ಕೋಟಿ ಭಾರತೀಯರಿಗೆ ಕರ್ತವ್ಯ ಪ್ರಜ್ಞೆ ಯೊಂದಿಗೆ ಬಿರ್ಲಾ ತನ್ನ ಪಾಲನ್ನು ಸಾರ್ವಜನಿಕ ವಲಯದ ಘಟಕ (ಪಿಎಸ್‌ಯು) ಸರ್ಕಾರಕ್ಕೆ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.

ಅಸ್ತಿತ್ವ ಅಥವಾ ಯಾವುದೇ ದೇಶೀಯ ಹಣಕಾಸು ಘಟಕ ಅಥವಾ ಸರ್ಕಾರವು ಕಂಪನಿಯನ್ನು ಮುಂದುವರಿಸುವ ಕಾಳಜಿಯೆಂದು ಪರಿಗಣಿಸುವ ಯಾವುದೇ ಇತರ ಘಟಕಕ್ಕೆ ತಮ್ಮ ಪಾಲು ನೀಡಲು ಮನಸು ಮಾಡಿದ್ದಾರೆ.

ಇದನ್ನೂ ಓದಿ: ಐಪಿಒನಿಂದ 4 ಸಾವಿರ ಕೋಟಿ ಸಂಗ್ರಹದ ಗುರಿ; ಸೆಬಿಗೆ ದಾಖಲೆಗಳನ್ನು ಸಲ್ಲಿಸಿದ ನೈಕಾ

ವಿಐಎಲ್ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ಹಾಗೂ ನಿಯಂತ್ರಣ ಮತ್ತು ಸರ್ಕಾರಿ ಬಾಕಿಗಳನ್ನು ಪಾವತಿಸಲು ವಿಐಎಲ್ 25,000 ಕೋಟಿ ಸಂಗ್ರಹಿಸಲು ಪ್ರಯತ್ನಿಸುತ್ತಿದೆ ಎಂದು ಬಿರ್ಲಾ ಹೇಳಿದರು. ಸರಿಹೊಂದಿಸಿದ ಒಟ್ಟು ಆದಾಯ (ಎಜಿಆರ್), ಸ್ಪೆಕ್ಟ್ರಮ್ ಬಾಕಿಗಳ ಮೇಲೆ ಸಮರ್ಪಕ ಮೊರೆಟೋರಿಯಂ ಮತ್ತು ತಕ್ಷಣದ ಹಾಗೂ ಸಕ್ರಿಯ ಸರ್ಕಾರದ ಬೆಂಬಲವಿಲ್ಲದೆ ವಿಐಎಲ್‌ನ ಕಾರ್ಯಾಚರಣೆಗಳು ಹಿಂಪಡೆಯಲಾಗದ ಕುಸಿತದ ಹಂತದಲ್ಲಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಹೂಡಿಕೆದಾರರು ಕೂಡ ಈ ವಿಷಯಗಳ ಬಗ್ಗೆ ಸ್ಪಷ್ಟತೆ ಕೋರಿದ್ದಾರೆ ಎಂದು ಅವರು ಹೇಳಿದ್ದಾರೆ. ಕಂಪನಿಯನ್ನು ಉಳಿಸಲು ಮತ್ತು ನಮ್ಮ ಖಾಸಗಿ ಹಿತಾಸಕ್ತಿ ಪರಿಗಣಿಸದೆ ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ತುರ್ತಾಗಿ ಅನ್ವೇಷಿಸಲು ಸರ್ಕಾರದೊಂದಿಗೆ ಕೆಲಸ ಮಾಡಲು ತಾನು ಹಾಗೂ ತಮ್ಮ ತಂಡವು ಹೆಚ್ಚು ಸಂತೋಷಡುತ್ತದೆ ಎಂದು ಬಿರ್ಲಾ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.