ನವದೆಹಲಿ: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಹ್ಯಾಂಡ್‌ಸೆಟ್ ಬಿಡುಗಡೆ ಮಾಡಿದೆ. ಎರಡು ವರ್ಷಗಳವರೆಗೆ ಅನಿಯಮಿತ ಧ್ವನಿ ಕರೆ ಮತ್ತು ತಿಂಗಳಿಗೆ 2 ಜಿಬಿ ಡೇಟಾ ನೀಡಲಿದೆ.
ಟೆಲಿಕಾಂ ವಲಯದಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದ್ದರಿಂದ ಹೊಸ ಹ್ಯಾಂಡ್ಸೆಟ್ನೊಂದಿಗೆ ಮಾರುಕಟ್ಟೆ ಬಂದಿದೆ. ತನ್ನ ಪ್ರತಿಸ್ಪರ್ಧಿ ಭಾರ್ತಿ ಏರ್ಟೆಲ್ನ ಇತ್ತೀಚಿನ ತಿಂಗಳಲ್ಲಿ ಚಂದಾದಾರರನ್ನು ವೇಗವಾಗಿ ಸೇರಿಸಿಕೊಳ್ಳುತ್ತಿದೆ. ಈ ಯೋಜನೆಯು ಜಿಯೋನ ‘2ಜಿ ಮುಕ್ತ ಭಾರತ್’ ಯೋಜನೆಗೆ ಅನುಗುಣವಾಗಿದ್ದು, ಭಾರತವನ್ನು 4 ಜಿ ಮಾರುಕಟ್ಟೆಯನ್ನಾಗಿ ಮಾಡುವ ಗುರಿ ಹೊಂದಿದೆ.
ಭಾರತದಲ್ಲಿ ಈಗಲೂ 300 ಮಿಲಿಯನ್ ಚಂದಾದಾರರು 2ಜಿ ಯುಗದಲ್ಲಿ 'ಸಿಲುಕಿಕೊಂಡಿದ್ದಾರೆ. ಅಂತರ್ಜಾಲದ ಮೂಲ ಫೀಚರ್ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ 5ಜಿ ಕ್ರಾಂತಿಯು ಜಗತ್ತಿನ ಮುಂದೆ ನಿಂತಿದೆ ಎಂದು ರಿಲಯನ್ಸ್ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದರು.
ಇದನ್ನೂ ಓದಿ: 'ಬಜೆಟ್ನ ತೆರಿಗೆ ಘೋಷಣೆಗಳು ಅಂತಾರಾಷ್ಟ್ರೀಯ ಹಣಕಾಸು ಕ್ಷೇತ್ರದ ಆಕರ್ಷಣೆ'
ಹೊಸ ಬಳಕೆದಾರರಿಗಾಗಿ ಆಫರ್ ಪ್ಯಾಕ್-ಇನ್ ಜಿಯೋ ಫೋನ್ ಸಾಧನವು 2 ವರ್ಷಗಳ ಅನಿಯಮಿತ ಧ್ವನಿ ಕರೆ ಮತ್ತು ಡೇಟಾ (ಪ್ರತಿ ತಿಂಗಳು 2 ಜಿಬಿ ಹೈಸ್ಪೀಡ್ ಡೇಟಾ) 1,999 ರೂ.ಗೆ ಲಭ್ಯವಾಗಲಿದೆ. 1 ವರ್ಷದ ಅನಿಯಮಿತ ಸೇವೆಗಳನ್ನು ಹೊಂದಿರುವ ಜಿಯೋಫೋನ್ 1,499 ರೂ.ಗಳಿಗೆ ಲಭ್ಯವಾಗಲಿದೆ.
2ಜಿ ಗ್ರಾಹಕರು 2 ವರ್ಷಗಳ ಅವಧಿಯಲ್ಲಿ ಸುಮಾರು 5,000 ರೂ. ಖರ್ಚು ಮಾಡುತ್ತಾರೆ. ಇದರಲ್ಲಿ ಒಟ್ಟು 3,600 ರೂ. ರೀಚಾರ್ಜ್ ಮತ್ತು ಒಂದು ಫೀಚರ್ ಫೋನ್ ಬೆಲೆ 1,200-1,500 ರೂ.ನಷ್ಟಿದೆ.