ಮುಂಬೈ: ಜಿಯೋ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸಿ ಹೊಸತನಕ್ಕೆ ನಾಂದಿ ಹಾಡಿದ್ದ ದಿಗ್ಗಜ ಉದ್ಯಮಿ ಮುಖೇಶ್ ಅಂಬಾನಿ ಇಂದು ಮುಂಬೈನಲ್ಲಿ ನಡೆದ ವಾರ್ಷಿಕ ಸಮ್ಮೇಳನದಲ್ಲಿ ಜಿಯೋ ಗ್ರಾಹಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ರಿಲಯನ್ಸ್ ಕಂಪನಿ ಸೌದಿ ಆರ್ಮಾಕೋ ಜೊತೆಗೆ ಇಂಧನ ಹಾಗೂ ಕೆಮಿಕಲ್ಸ್ ವಿಭಾಗದಲ್ಲಿ ದೂರಗಾಮಿ ಸಹಭಾಗಿತ್ವ ಹೊಂದಲು ಒಪ್ಪಂದ ಮಾಡಿಕೊಂಡಿದೆ ಎನ್ನುವ ವಿಚಾರವನ್ನು ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡಿದ್ದಾರೆ.
ಜಿಯೋ ಫೈಬರ್ ಸೆಪ್ಟೆಂಬರ್ 5ರಂದು ಮಾರುಕಟ್ಟೆಗೆ ಕಾಲಿಡಲಿದ್ದು, ಜಿಯೋ ಮೂರನೇ ವಾರ್ಷಿಕೋತ್ಸವಕ್ಕೆ ಜಿಯೋ ಫೈಬರ್ ಗ್ರಾಹಕರಿಗೆ ಪರಿಚಯಿಸಲಿದೆ.
ಜಿಯೋ ಫೈಬರ್ ಸೇವೆಗಳು ನಾಲ್ಕು ಪ್ರಮುಖ ಅಂಶಗಳು:
- 100 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಜಿಯೋ ನೀಡಲಿದೆ.
- ಪ್ಲಾನ್ಗಳ ಆಧಾರದಲ್ಲಿ 1GBPS ವೇಗದ ಇಂಟರ್ನೆಟ್ ಅನ್ನು ಗ್ರಾಹಕರು ಪಡೆಯಲಿದ್ದಾರೆ.
- 700 - 10000 ತಿಂಗಳಿಗೆ ದರವನ್ನು ಹೊಂದಿರಲಿದೆ. ಮನೆಯಲ್ಲಿ ನೀವು ಜಿಯೋ ಫೈಬರ್ ಗ್ರಾಹಕರಾದರೆ, ನಿಮ್ಮ 4 ಕೆ, ಎಲ್ಇಡಿ ಟಿವಿಗಳಿಗೆ ನೀವು ಈ ಸೇವೆಯನ್ನ ಪಡೆಯಬಹುದು.
ಜಿಯೋ ಫೈಬರ್ ಸೆಟಪ್ ಬಾಕ್ಸ್:
- ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ ಆದ ದಿನವೇ ಮನೆಯಲ್ಲಿ ಜಿಯೋದಲ್ಲಿ ಸಿನೆಮಾ ವೀಕ್ಷಣೆಗೆ ಅವಕಾಶ (ಫಸ್ಟ್ ಡೇ-ಫಸ್ಟ್ ಶೋ ಸೇವೆ)
- ಫಸ್ಟ್ ಡೇ ಫಸ್ಟ್ ಶೋ ಸೇವೆಗೆ 2020ರ ಮಧ್ಯಭಾಗದಲ್ಲಿ ಚಾಲನೆ
ಜಮ್ಮುವಿನ ಜೊತೆ ರಿಲಯನ್ಸ್:
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಒಂದಷ್ಟು ಕಂಪೆನಿಗಳು ಕಣಿವೆ ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಇದೇ ನಿಟ್ಟಿನಲ್ಲಿ ರಿಲಯನ್ಸ್ ಸಹ ಇದ್ದು ನೂತನ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಕಾಶ್ಮೀರ ಮತ್ತು ಲಡಾಖ್ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಿಲಯನ್ಸ್ ಹೂಡಿಕೆ ಮಾಡಲಿದೆ ಎಂದು ಮುಖೇಶ್ ಅಂಬಾನಿ ಘೋಷಿಸಿದ್ದಾರೆ.