ನವದೆಹಲಿ : ಜೆಟ್ ಇಂಧನ ಬೆಲೆಯನ್ನು ಶನಿವಾರದಂದು ಶೇ 6.7ರಷ್ಟು ಏರಿಕೆ ಮಾಡಲಾಗಿದ್ದು, ಕಳೆದ ತಿಂಗಳಿನ ಬೆಲೆ ಕಡಿತ ಹಿಮ್ಮೆಟ್ಟಿಸಿದಂತಾಗಿದೆ. ಮುಂದಿನ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅಂತಾರಾಷ್ಟ್ರೀಯ ಬೆಲೆಗಳು ಆಧರಿಸಿ ವ್ಯತ್ಯಾಸ ಆಗಬಹುದು.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆ ಕಿಲೋಲಿಟರ್ಗೆ (ಕೆಎಲ್) 3,885 ರೂ. ಶೇ 6.7ರಷ್ಟು ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕಿಲೋಗೆ 61,690.28 ರೂ.ಯಲ್ಲಿ ಲಭ್ಯವಾಗುತ್ತಿದೆ.
ಸ್ಥಳೀಯ ತೆರಿಗೆಗಳ ಪ್ರಮಾಣ ಅವಲಂಬಿಸಿ ದರಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಕಳೆದ ತಿಂಗಳು ಎರಡು ಸುತ್ತಿನ ಕಡಿತದ ನಂತರ ಬೆಲೆ ಹೆಚ್ಚಳವಾಗಿದೆ. ಏಪ್ರಿಲ್ 1ರಂದು ಶೇ. 3ರಷ್ಟು ಮತ್ತು ಏಪ್ರಿಲ್ 16ರಂದು ಪ್ರತಿ ಕಿಲೋಗೆ 568.88 ರೂ.ಯಷ್ಟು ಇಳಿಕೆ ಮಾಡಲಾಗಿತ್ತು.
ಇದನ್ನೂ ಓದಿ: SBI ಸಾಲಗಾರರಿಗೆ ಗುಡ್ ನ್ಯೂಸ್: ಇಂದಿನಿಂದ ಗೃಹ ಸಾಲ ಬಡ್ಡಿ ರೇಟ್ ಇಳಿಕೆ!
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶನಿವಾರ 16ನೇ ದಿನದಲ್ಲಿ ಬದಲಾಗದೆ ಉಳಿದಿವೆ. ಆದರೆ, ತೈಲ ಕಂಪನಿ ಅಧಿಕಾರಿಗಳು ದರದಲ್ಲಿ ಹೆಚ್ಚಳ ಸೂಚಿಸಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಬೇಡಿಕೆಯ ಹೊರತಾಗಿಯೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಅಮೆರಿಕದ ಬಲವಾದ ಬೇಡಿಕೆ ಚೇತರಿಕೆ ಮತ್ತು ದುರ್ಬಲ ಡಾಲರ್ ಕಾರಣದಿಂದಾಗಿ ಏರುತ್ತಲೇ ಇವೆ.
ಕಳೆದ 4 ದಿನಗಳಿಂದ (ಏಪ್ರಿಲ್ 27ರಿಂದ) ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ದುಬೈ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 2.91 ಡಾಲರ್ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಗಳು ಮುಂದಿನ ದಿನಗಳಲ್ಲಿ ದೃಢವಾಗಿ ಉಳಿಯುವ ನಿರೀಕ್ಷೆಯಿದೆ. ಇದು ಮೇಲ್ಮುಖವಾಗಿ ಸಾಗಲು ಒತ್ತಡವನ್ನುಂಟು ಮಾಡುತ್ತದೆ.
ಇನ್ಪುಟ್ ವೆಚ್ಚದ ಆಧಾರದ ಮೇಲೆ ಪ್ರತಿದಿನ ದರಗಳನ್ನು ಪರಿಷ್ಕರಿಸಬೇಕಾಗಿರುವ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಾದ ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಏಪ್ರಿಲ್ 15ರಂದು ಬೆಲೆ ಕಡಿಮೆಗೊಳಿಸಿದ್ದವು.
ಈ ನಂತರ ದರಗಳು ಸ್ಥಿರವಾಗಿವೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಈಗ 90.40 ರೂ. ಹಾಗೂ ಡೀಸೆಲ್ 80.73 ರೂ.ಯಲ್ಲಿ ಮಾರಾಟ ಆಗುತ್ತಿದೆ.