ನವದೆಹಲಿ: ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಜಾಗತಿಕ ಸೂಚ್ಯಂಕಗಳ ಪ್ರಭಾವಕ್ಕೆ ಒಳಗಾಗಿ ದಾಖಲಿಸಿದ ಗರಿಷ್ಠ ಮಟ್ಟ ಏರಿಕೆಯಿಂದಾಗಿ ಹೂಡಿಕೆದಾರರು ಸೋಮವಾರ ಒಂದೇ ದಿನ 2 ಲಕ್ಷ ಕೋಟಿ ರೂ.ಯಷ್ಟು ಸಂಪತ್ತು ವೃದ್ಧಿಸಿಕೊಂಡಿದ್ದಾರೆ.
ದಿನದ ವಹಿವಾಟಿನ ಅಂತ್ಯಕ್ಕೆ ಬಿಎಸ್ಇ ಸೆನ್ಸೆಕ್ಸ್ 704.37 ಅಂಕ ಅಥವಾ ಶೇ 1.68ರಷ್ಟು ಜಿಗಿದು ತನ್ನ ಸಾರ್ವಕಾಲಿಕ ಗರಿಷ್ಠ 42,597.43 ಅಂಕಗಳಿಗೆ ತಲುಪಿತು. ಮಧ್ಯಂತರ ಅವಧಿಯಲ್ಲಿ ಇದು 42,645.33 ಅಂಕಗಳ ಮಟ್ಟಕ್ಕೂ ಹೋಗಿತ್ತು.
ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ ದಿನದ ಗರಿಷ್ಠ 12,474.05 ಅಂಕಗಳಿಗ ತಲುಪಿ, ಅಂತಿಮವಾಗಿ 197.50 ಅಂಕ ಅಥವಾ ಶೇ 1.61ರಷ್ಟು ಏರಿಕೆಯಾಗಿ ಜೀವಮಾನದ ಗರಿಷ್ಠ 12,461.05 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಬಿಎಸ್‌ಇ ಪಟ್ಟಿಮಾಡಿದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳ 2,06,558.75 ಕೋಟಿ ರೂ.ಗಳಿಂದ 1,65,67,257.92 ಕೋಟಿ ರೂ. ಏರಿಕೆಯಾಗಿದೆ.
ಮಾರುಕಟ್ಟೆಗಳು ವಾರದ ಆರಂಭದಲ್ಲಿ ಸದೃಢವಾದ ವಹಿವಾಟಿನೊಂದಿಗೆ ಪ್ರಾರಂಭಿಸಿ ಹೊಸ ದಾಖಲೆ ಸೃಷ್ಟಿಸಿದವು. ಜಾಗತಿಕ ಸೂಚ್ಯಂಕಗಳ ಇದಕ್ಕೆ ಪ್ರೇರಕವಾದವು. ಇದರಲ್ಲಿ ಮುಖ್ಯವಾಗಿ ಜೋ ಬೈಡನ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಸುದ್ದಿಗೆ ಎಲ್ಲಾ ಷೇರು ಮಾರುಕಟ್ಟೆಗಳು ಸಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದವು ಎಂದು ರಿಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಸಂಶೋಧಕಾ ವಿ.ಪಿ. ಅಜಿತ್ ಮಿಶ್ರಾ ವಿಶ್ಲೇಷಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ಹೊರತುಪಡಿಸಿ (ಸರ್ಕಾರದ ರಜಾ ದಿನಗಳು) ಉಳಿದ ದಿನಗಳಲ್ಲಿ ಬೆಳಗ್ಗೆ 9:15ರಿಂದ ಮಧ್ಯಾಹ್ನ 3:30ರ ವರೆಗೆ ಷೇರುಪೇಟೆ ವಹಿವಾಟು ನಡೆಯುತ್ತದೆ (ದಿನದಲ್ಲಿ 6 ಗಂಟೆ 25 ನಿಮಿಷ).