ನವದೆಹಲಿ : ದೇಶದಲ್ಲಿ ಕೋವಿಡ್ -19 ಎರಡನೇ ಅಲೆಯು ಔಷಧಿಗಳ ಮಾರಾಟವನ್ನು ಹೆಚ್ಚಿಸಿದೆ ಮತ್ತು ಔಷಧೀಯ ವಲಯದ ಬೆಳವಣಿಗೆಗೆ ಕಾರಣವಾಗಿದೆ.
ವಿಶ್ವದ ಅತಿದೊಡ್ಡ ಔಷಧೀಯ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಎಂಎಸ್ ಹೆಲ್ತ್‌ನ ಒಟ್ಟು ಮಾರಾಟ ಲೆಕ್ಕಪರಿಶೋಧನೆಯ ಮಾಹಿತಿಯ ಪ್ರಕಾರ, ಭಾರತೀಯ ಫಾರ್ಮಾ ಮಾರುಕಟ್ಟೆ (ಐಪಿಎಂ) ಮಾರಾಟದಲ್ಲಿ 2021ರ ಏಪ್ರಿಲ್‌ನಲ್ಲಿ 59 ಶೇಕಡಾ, ಮಾರ್ಚ್ 2021ರಲ್ಲಿ 16 ಶೇಕಡಾ ಏರಿಕೆ ಕಂಡಿದೆ.
ವಾರ್ಷಿಕ ವಹಿವಾಟಿನ ಆಧಾರದ ಮೇಲೆ, ಭಾರತೀಯ ಫಾರ್ಮಾ ಮಾರುಕಟ್ಟೆ ಶೇಕಡಾ 9.6ರಷ್ಟು ಏರಿಕೆಯಾಗಿದೆ.