ETV Bharat / business

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇಕಡಾ 40ರಷ್ಟು ಚೇತರಿಕೆ: ಸಿಎಮ್ಆರ್ ವರದಿ - ಸಿಎಮ್ಆರ್ ವರದಿ

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ಈ ವರ್ಷದ ದ್ವಿತೀಯಾರ್ಧದಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಚೇತರಿಕೆಯ ಸಂಭಾವ್ಯತೆ ಹೊಂದಿದೆ ಎಂದು ವರದಿಯೊಂದು ತಿಳಿಸಿದೆ.

mobile
mobile
author img

By

Published : Aug 1, 2020, 2:41 PM IST

ನವದೆಹಲಿ: ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ಈಗ ಪುನರುಜ್ಜೀವನವಾದಂತೆ ತೋರುತ್ತಿದೆ. ಇದು ಈ ವರ್ಷದ ದ್ವಿತೀಯಾರ್ಧದಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಚೇತರಿಕೆಯ ಸಂಭಾವ್ಯತೆ ಹೊಂದಿದೆ ಎಂದು ಸಿಎಂಆರ್​ ರಿಪೋರ್ಟ್​​ನಲ್ಲಿ ಹೇಳಲಾಗಿದೆ.

ಅಲ್ಪಾವಧಿಯಲ್ಲಿ ಆರಂಭಿಕ ಆನ್‌ಲೈನ್ ಮಾರಾಟ ಉತ್ಸವಗಳಿಂದ ಉತ್ತೇಜಿಸಲ್ಪಟ್ಟು, ಮೊಬೈಲ್ ಮಾರುಕಟ್ಟೆ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಈ ಸಂದರ್ಭದಲ್ಲಿ ಹೈಪರ್‌ಲೋಕಲ್ ವಿತರಣಾ ಮಾದರಿಗಳ ಮೇಲೆ ಹೆಚ್ಚು ಗಮನಹರಿಸುವುದು ಮತ್ತು ಹೆಚ್ಚು 5 ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದರತ್ತ ಕಂಪನಿಗಳು ಗಮನ ಹರಿಸುವುದು ಉತ್ತಮ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಸಿಎಮ್‌ಆರ್‌ನ ‘ಭಾರತದ ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆ ವಿಮರ್ಶಾ ವರದಿ’ ತಿಳಿಸಿದೆ.

ಸಿಎಮ್ಆರ್​ನ ಪ್ರಸ್ತುತ ಅಂದಾಜುಗಳು ಭಾರತದಲ್ಲಿ ಸ್ಮಾರ್ಟ್​ ಫೋನ್ ಮಾರುಕಟ್ಟೆಯ ಉತ್ತಮ ಕಾರ್ಯಕ್ಷಮತೆಯನ್ನು ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.