ETV Bharat / business

40 ದಿನಗಳಲ್ಲಿ 30 ಸಾವಿರ ಹೊಸ ಐ-20 ಕಾರ್ ಬುಕ್ಕಿಂಗ್​: 10,000 ವಿತರಣೆ

ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ವಾಹನ ತಯಾರಕ ಕಂಪನಿಯಾದ ಹ್ಯುಂಡೈ, ಇದುವರೆಗೆ 10,000 ಯುನಿಟ್​ಗಳನ್ನು ಗ್ರಾಹಕರಿಗೆ ತಲುಪಿಸಿದೆ. ಬಿಡುಗೆಯಾದ ದಿನದಿಂದ ಇಲ್ಲಿಯವರೆಗೆ 40 ಸಾವಿರ ಬುಕ್ಕಿಂಗ್​​ ಸ್ವೀಕರಿಸಿದೆ.

i20
ಐ20
author img

By

Published : Dec 14, 2020, 5:16 PM IST

ನವದೆಹಲಿ: ಹ್ಯುಂಡೈ ಮೋಟರ್ ಇಂಡಿಯಾ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಐ 20ಯ ಎಲ್ಲ ಹೊಸ ಶ್ರೇಣಿಗಳಲ್ಲಿ ಕಳೆದ 40 ದಿನಗಳಲ್ಲಿ ಸುಮಾರು 30,000 ಬುಕ್ಕಿಂಗ್​ ಸ್ವೀಕರಿಸಿದೆ ಎಂದು ತಿಳಿಸಿದೆ.

ದೇಶದ ಎರಡನೇ ಅತಿದೊಡ್ಡ ಪ್ರಯಾಣಿಕ ವಾಹನ ತಯಾರಕ ಕಂಪನಿಯಾದ ಹ್ಯುಂಡೈ, ಇದುವರೆಗೆ 10,000 ಯುನಿಟ್​ಗಳನ್ನು ಗ್ರಾಹಕರಿಗೆ ತಲುಪಿಸಿದೆ.

ಭವಿಷ್ಯದ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನಗಳ ಜತೆ ಭಾರತೀಯ ಗ್ರಾಹಕರ ಮನಸ್ಸನ್ನು ಸೆಳೆದಿರುವ ಹೊಸ ಐ 20 ಯು ಅತ್ಯುನ್ನತ ಗ್ರಾಹಕ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ನಿರ್ದೇಶಕ (ಮಾರಾಟ, ಮಾರ್ಕೆಟಿಂಗ್ & ಸೇವೆ) ತರುಣ್ ಗರ್ಗ್ ಹೇಳಿದ್ದಾರೆ.

ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್ ಆಸಕ್ತಿ: ಬಿಡ್ ಸಲ್ಲಿಕೆಗೆ ಇಂದೇ ಕೊನೆ ದಿನ

ಹ್ಯುಂಡೈ ಹೊಸ ಮಾದರಿಯ ಐ 20 ಶ್ರೇಣಿಗಳನ್ನು ನವೆಂಬರ್ 5ರಂದು 6.79 ಲಕ್ಷದಿಂದ 11.17 ಲಕ್ಷ ರೂ. (ಎಕ್ಸ್ ಶೋರೂಂ ದೆಹಲಿ) ನಡುವೆ ಬಿಡುಗಡೆ ಮಾಡಿತು. ಐ- 20 ಕಾರುಗಳು ನಾಲ್ಕನೇ ತಲೆಮಾರಿನ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ಆಗಿದ್ದು, ಮಾರುತಿ ಸುಜುಕಿ ಬಾಲೆನೊ, ಟಾಟಾ ಮೋಟಾರ್ಸ್ ಆಲ್ಟ್ರೊಜ್ ಮತ್ತು ಟೊಯೋಟಾ ಗ್ಲ್ಯಾನ್ಜಾಗೆ ಸ್ಪರ್ಧೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.