ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ನಡುವಿನ ಹಿಂಸಾತ್ಮಕ ಕೃತ್ಯದ ನಂತರ ಚೀನಾ ಜತೆಗಿನ ಒಪ್ಪಂದ ರದ್ದುಗೊಳ್ಳುತ್ತಿದ್ದು, ಈಗಾಗಲೇ ರೈಲ್ವೆ ಇಲಾಖೆ, ರಸ್ತೆ ಸಾರಿಗೆ ಒಪ್ಪಂದ ರದ್ದಾಗಿವೆ. ಇದರ ಮಧ್ಯೆ ಹೀರೋ ಸೈಕಲ್ ಕಂಪನಿ ಕೂಡ ಒಪ್ಪಂದ ಮುರಿದುಕೊಂಡಿದೆ.
ಸೈಕಲ್, ಬೈಕ್ ತಯಾರಿಕಾ ಕಂಪನಿಯಾಗಿರುವ ಹೀರೋ ಸೈಕಲ್ ಬಿಡಿ ಭಾಗಗಳು ಚೀನಾದಿಂದ ಆಮದಾಗುತ್ತಿದ್ದವು. ಆದರೆ ಇದೀಗ ಪಂಜಾಬ್ನಿಂದ ಈ ಬಿಡಿ ಭಾಗ ತರಿಸಿಕೊಳ್ಳಲು ನಿರ್ಧರಿಸಿರುವುದಾಗಿ ಕಂಪನಿ ಚೇರ್ಮನ್ ಪಂಕಜ್ ಮುಂಜಾಲ್ ತಿಳಿಸಿದ್ದಾರೆ. ಈಗಾಗಲೇ ಅಲ್ಲಿನ ಸಚಿವರೊಂದಿಗೆ ಮಾತುಕತೆ ಸಹ ನಡೆಸಿದ್ದಾಗಿ ತಿಳಿಸಿದ್ದಾರೆ.
ಮುಂದಿನ ಮೂರು ತಿಂಗಳಲ್ಲಿ ಚೀನಾದಿಂದ ಒಟ್ಟು 900 ಕೋಟಿ ರೂ. ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಇದೀಗ ನಾವು ಆ ಒಪ್ಪಂದ ರದ್ದು ಮಾಡಿದ್ದಾಗಿ ತಿಳಿಸಿದ್ದಾರೆ. ಇಷ್ಟು ದಿನ ಎಲ್ಲಾ ರೀತಿಯ ಸೈಕಲ್ಗಳ ಬಿಡಿ ಭಾಗ ಚೀನಾದಿಂದ ಆಮದಾಗುತ್ತಿದ್ದವು ಎಂದು ಅವರು ತಿಳಿಸಿದ್ದಾರೆ.
ಜತೆಗೆ ಜಪಾನ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡು ಅಲ್ಲೂ ಸ್ಥಾವರ ಸ್ಥಾಪಿಸಲು ತಾವು ನಿರ್ಧರಿಸುವುದಾಗಿ ಕಂಪನಿ ಹೇಳಿದೆ. ಕೊರೊನಾ ಸಮಯದಲ್ಲಿ ಕೇಂದ್ರ ಸರ್ಕಾರದ ಪಿಎಂ ಕೇರ್ಸ್ ನಿಧಿಗೆ ಹೀರೋ ಕಂಪನಿ 100 ಕೋಟಿ ರೂ. ದೇಣಿಗೆ ನೀಡಿದೆ.