ETV Bharat / business

ದುಡಿವ ರಟ್ಟೆಗೆ ಕೆಲಸವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ... ನೇಕಾರರ ಬದುಕು ಮೂರಾಬಟ್ಟೆ

author img

By

Published : Apr 17, 2019, 9:21 AM IST

Updated : Apr 17, 2019, 12:30 PM IST

ನೇಕಾರರ ಬವಣೆಗಳಿಗೆ ಕಿವಿಗೊಡದ ಸರ್ಕಾರಗಳು ಅವರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ಕೆಲವು ಘಟಕಗಳಿಗೆ ನೂಲು ಪೂರೈಕೆ ಆಗದ ಕಾರಣ ಬಹುತೇಕ ಘಟಕಗಳು ಸ್ಥಗಿತಗೊಂಡಿವೆ. ಕೆಲವು ಮಾತ್ರವೇ ತೆವಳುತ್ತಾ ಸಾಗುತ್ತಿವೆ.

ಕೈಮಗ್ಗ ನೇಕಾರಿಕೆ

ಭಾಗಲ್ಪುರ (ಬಿಹಾರ): ಭಾಗಲ್ಪುರ ರಾಧಾ ಗ್ರಾಮದಲ್ಲಿ ಸುಮಾರು 150ಕ್ಕೂ ಅಧಿಕ ಕುಟುಂಬಗಳು ನೇಕಾರಿಕೆಯನ್ನೇ ನಂಬಿ ತಲೆಮಾರುಗಳಿಂದ ಜೀವನ ಸಾಗಿಸುತ್ತಿವೆ. ಇಂದು ಬ್ರಾಂಡೆಡ್​ ಫ್ಯಾಷನ್​ ಟ್ರೆಂಡ್​ಗೆ ಸಿಲುಕಿದ ಕರಕುಶಲ ಉದ್ಯಮಕ್ಕೆ ಸರ್ಕಾರದ ಸಹಾಯಸ್ತ ಬೇಕಿದೆ.

ರಾಧಾ ಗ್ರಾಮದ ಬಹುತೇಕರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕೈಮಗ್ಗ ವೃತ್ತಿಯನ್ನು ಅವಲಂಬಿಸಿದ್ದಾರೆ. ಹಲವು ದಶಕಗಳಿಂದ ಸೀರೆ ನೇಯುವುದಕ್ಕೆ ಕಾಯಕ ಮಾಡಿಕೊಂಡು ಬರುತ್ತಿರುವ ನೇಕಾರರಿಗೆ ಆಧುನಿಕ ಮಾರುಕಟ್ಟೆ ದೊಡ್ಡ ಸ್ಪರ್ಧೆಯನ್ನೊಡ್ಡಿದೆ. ಬ್ರಾಂಡೆಡ್ ಟ್ರೆಂಡ್ ಜೀವನ ಶೈಲಿಗೆ ಮಾರು ಹೋಗಿರುವ ಯುವಪೀಳಿಗೆ ಸಾಂಪ್ರದಾಯಿಕ ಉಡುಗೆಯತ್ತ ತಿರುಗಿಯೂ ನೋಡುತ್ತಿಲ್ಲ ಎಂಬ ಕೂಗು ಹೆಚ್ಚಾಗುತ್ತಿದೆ.

ಕೈಮಗ್ಗ ನೇಕಾರಿಕೆ

ನೂಲು ಮತ್ತು ಸರ್ಕಾರದ ನೆರವಿಲ್ಲದೆ ದುಡಿಯುವ ರಟ್ಟೆಗೆ ಕೆಲಸವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲ. ಕೈಮಗ್ಗಗಳ ಸಪ್ಪಳ ಕೇಳಿಸುತ್ತಿಲ್ಲ. ಉಪಕರಣಗಳು ದೂಳು ಹಿಡಿಯುತ್ತಿವೆ. ಬಹುಪಾಲು ಮನೆಗಳಲ್ಲಿ ಮಹಿಳೆಯರು ಈ ಕೆಲಸ ಮಾಡುತ್ತಾ ಕುಟುಂಬಕ್ಕೆ ಹೆಗಲು ಕೊಟ್ಟಿದ್ದರು. ಮಾಸಿಕ ವರಮಾನಕ್ಕೂ ಈಗ ಕುತ್ತು ಬಂದಿದೆ.

ಬಿಹಾರದ ನೇಕಾರರ ರೀತಿ ರಾಜ್ಯದ ಕೈಮಗ್ಗದ ಉದ್ಯಮ ಭಿನ್ನವಾಗಿಲ್ಲ. ಕರ್ನಾಟಕದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಕೈಮಗ್ಗ ಘಟಕಗಳಿದ್ದವು. ಸಕಾಲದಲ್ಲಿ ನೂಲು ಪೂರೈಕೆ ಆಗದೆ ಹಾಗೂ ಇತರೆ ಕಾರಣಗಳಿಂದ ಬಹುತೇಕ ಸ್ಥಗಿತಗೊಂಡಿವೆ. ಸರ್ಕಾರದ ಪ್ರೋತ್ಸಾಹ ಧನ ಸಹ ಸಿಗುತ್ತಿಲ್ಲ. ನಾನಾ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಕ್ಷೀಣಿಸುತ್ತಿದೆ. ಕೈಮಗ್ಗ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸಹ ಸಿಗುತ್ತಿಲ್ಲ ಎಂಬುದು ನೇಕಾರರ ಅಂಬೋಣ.

Intro:Body:Conclusion:
Last Updated : Apr 17, 2019, 12:30 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.