ETV Bharat / business

ರಿಯಲ್ ಎಸ್ಟೇಟ್​ GST ಮರುಪಾವತಿಗೆ ಅವಕಾಶ ನೀಡಿದ ತೆರಿಗೆ ಇಲಾಖೆ - undefined

ಒಂದೊಮ್ಮೆ ನಿರ್ಮಾಣಗಾರರು ಮನೆ ಖರೀದಿದಾರರಿಂದ 2019ರ ಏಪ್ರಿಲ್​ 1ರಿಂದ ಶೇ 12ರಷ್ಟು ಜಿಎಸ್​ಟಿ ಸಂಗ್ರಹಿಸಿ ಅನಂತರ ಹೊಸ ಜಿಎಸ್​ಟಿ ದರ ಶೇ 5ನ್ನು ಆಯ್ಕೆ ಮಾಡಿಕೊಂಡರೆ, ಅಂತಹ ಸಂದರ್ಭದಲ್ಲಿ ಹೆಚ್ಚುವರಿ ತೆರಿಗೆ ದರ ಶೇ 7ರ ಸ್ಲ್ಯಾಬ್ ಅನ್ನು ಗ್ರಾಹಕರಿಗೆ ಮರುಪಾವತಿಸಬೇಕು ಎಂದು ಹೇಳಿದೆ.

ಸಾಂದರ್ಭಿಕ ಚಿತ್ರ
author img

By

Published : May 9, 2019, 7:39 AM IST

ನವದೆಹಲಿ: 2018-19ರ ವಿತ್ತೀಯ ವರ್ಷದಲ್ಲಿ ಬುಕ್ಕಿಂಗ್ ಮಾಡಿದ ಫ್ಲ್ಯಾಟ್​ಗಳನ್ನು ಖರೀದಿದಾರರು ರದ್ದುಪಡಿಸಿದರೆ, ರಿಯಲ್​ ಎಸ್ಟೇಟ್​ ಸಂಸ್ಥೆಗಳು ಅವರಿಂದ ವಸೂಲಿ ಮಾಡಿದ್ದ ಜಿಎಸ್​ಟಿ ಮರುಪಾವತಿಸಬೇಕು ಎಂದು ತೆರಿಗೆ ಇಲಾಖೆ ತಿಳಿಸಿದೆ.

ಒಂದೊಮ್ಮೆ ನಿರ್ಮಾಣಗಾರರು ಮನೆ ಖರೀದಿದಾರರಿಂದ 2019ರ ಏಪ್ರಿಲ್​ 1ರಿಂದ ಶೇ 12ರಷ್ಟು ಜಿಎಸ್​ಟಿ ಸಂಗ್ರಹಿಸಿ ಅನಂತರ ಹೊಸ ಜಿಎಸ್​ಟಿ ದರ ಶೇ 5ನ್ನು ಆಯ್ಕೆ ಮಾಡಿಕೊಂಡರೆ, ಅಂತಹ ಸಂದರ್ಭದಲ್ಲಿ ಹೆಚ್ಚುವರಿ ತೆರಿಗೆ ದರವಾದ ಶೇ 7ರ ಸ್ಲ್ಯಾಬ್ ಅನ್ನು ಗ್ರಾಹಕರಿಗೆ ಮರುಪಾವತಿಸಬೇಕು ಎಂದು ಹೇಳಿದೆ.

ರಿಯಲ್ ಎಸ್ಟೇಟ್​ ವಲಯಕ್ಕೆ ಹೊಸ ಜಿಎಸ್​ಟಿ ದರ ಆಯ್ಕೆಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಈ ಕುರಿತು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್​ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಸ್ಪಷ್ಟನೆ ನೀಡಿದೆ.

ಜಿಎಸ್​ಟಿ ದರ ಆಯ್ಕೆಯ ಅವಕಾಶವನ್ನು ತಿಳಿಸಲು ರಿಯಲ್ ಎಸ್ಟೇಟ್​ ಸಂಸ್ಥೆಗಳಿಗೆ ಮೇ 10ರ ವರೆಗೆ ಕಾಲಾವಕಾಶ ನೀಡಲಾಗಿದೆ. ಇನ್​ಪುಟ್​ ಟ್ಯಾಕ್ಸ್​ ಕ್ರೆಡಿಟ್​ನೊಂದಿಗೆ (ಐಟಿಸಿ) ಹಳೆಯ ಜಿಎಸ್​ಟಿ ದರಗಳಲ್ಲಿಯೇ ಮುಂದುವರಿಯಲು ಬಯಸುವ ಸಂಸ್ಥೆಗಳು ಆಯಾ ಸ್ಥಳೀಯ ಅಧಿಕಾರಿಗಳಿಗೆ ತಮ್ಮ ನಿರ್ಧಾರವನ್ನು ತಿಳಿಸಬೇಕು. ಇಲ್ಲವಾದರೆ, ಸ್ವಯಂಚಾಲಿತವಾಗಿ ಹೊಸ ತೆರಿಗೆ ದರಗಳು ಅನ್ವಯವಾಗಲಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.