ನವದೆಹಲಿ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹೂಡಿಕೆದಾರರಿಗೆ ಸರ್ಕಾರ ತನ್ನ ಚಿನ್ನದ ಬಾಂಡ್ ಯೋಜನೆಯಡಿ ಪ್ರತಿ ಗ್ರಾಂ.ಗೆ 50 ರೂ. ರಿಯಾಯಿತಿ ನೀಡಿ ಡಿಜಿಟಲ್ ಮೋಡ್ ಮೂಲಕ ಪಾವತಿ ಮಾಡಲಿದೆ.
ಹೂಡಿಕೆದಾರರು ಚಂದಾದಾರಿಕೆಗಾಗಿ ಡಿಜಿಟ್ ಮೋಡ್ ಬಳಸುತ್ತಿದ್ದರೆ, ಚಿನ್ನದ ಬಾಂಡ್ ವಿತರಣೆಯ ಬೆಲೆ ಪ್ರತಿ ಗ್ರಾಂ. ಚಿನ್ನಕ್ಕೆ 5,054 ರೂ. ಇರಲಿದೆ. ಇಲ್ಲದಿದ್ದರೆ ಚಂದಾದಾರಿಕೆ ಅವಧಿಯಲ್ಲಿ ಬಾಂಡ್‌ನ ವಿತರಣಾ ದರ 5,104 ರೂ.ನಷ್ಟಾಗುತ್ತೆ.
2020ರ ಅಕ್ಟೋಬರ್ 9ರ ಅಧಿಸೂಚನೆಯ ಪ್ರಕಾರ, ಸಾವರಿನ್ ಗೋಲ್ಡ್ ಬಾಂಡ್ಗಳು 2020-21 (ಸರಣಿ 9) 2021ರ ಜನವರಿ 11-15ರ ಓಪನಿಂಂಗ್ ಅನ್ನು ಜನವರಿ 19ರಂದು ಇತ್ಯರ್ಥ ಮಾಡಲಾಗುತ್ತದೆ