ನವದೆಹಲಿ: ಜಾಗತಿಕ ಪೇಟೆಯಲ್ಲಿ ಅಮೂಲ್ಯವಾದ ಲೋಹದ ಬೆಲೆ ಏರಿಕೆ ಕಂಡುಬಂದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ 10 ಗ್ರಾಂ ಚಿನ್ನದ ದರ 185 ರೂ. ಹೆಚ್ಚಳವಾಗಿ 49,757 ರೂ.ಗೆ ತಲುಪಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂಗೆ ಗರಿಷ್ಠ 49,572 ರೂ.ಗೆ ಕೊನೆಗೊಂಡಿತ್ತು. ಬೆಳ್ಳಿಯ ಬೆಲೆ ಕೂಡ ಪ್ರತಿ ಕಿ.ಗ್ರಾಂಗೆ 1,322 ರೂ. ಹೆಚ್ಚಳವಾಗಿ 68,156 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಪ್ರತಿ ಔನ್ಸ್‌ಗೆ 1,885 ಡಾಲರ್‌ಗಳಷ್ಟು ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಸಹ ಗ್ರೀನ್ ಝೋನ್ಲ್ಲಿದ್ದು 26.32 ಡಾಲರ್‌ನಲ್ಲಿ ಖರೀದಿ ಆಗುತ್ತಿದೆ.
ಡಾಲರ್ ಕುಸಿತದ ಮಧ್ಯೆ ಚಿನ್ನದ ಬೆಲೆ ಏರಿಕೆಯಾಗಿದೆ. ಹೊಸ ಕೊರೊನಾ ವೈರಸ್ ಮತ್ತು ಲಾಕ್‌ಡೌನ್ ಬಗೆಗಿನ ಕಳವಳಗಳು ಚಿನ್ನದ ಬೆಲೆ ಹೆಚ್ಚಿಸಿವೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ: ಉದ್ಯಮಗಳ ಮೇಲಿನ ನಿಯಮ ಹೊರೆ ಇಳಿಕೆ: ಪರಿಶೀಲನೆಗಾಗಿ ರಾಜ್ಯಗಳಿಗೆ ಸೂಚನೆ