ನವದೆಹಲಿ: ಅಂತಾರಾಷ್ಟ್ರೀಯ ಗೋಲ್ಡ್ ಮಾರುಕಟ್ಟೆಯ ನಡೆ ಅನುಸರಿಸಿದ ದೇಶಿಯ ಚಿನಿವಾರ ಪೇಟೆಯಲ್ಲಿ ಬೆಳ್ಳಿ ದರ ಕುಸಿದರೆ ಚಿನ್ನದ ದರದಲ್ಲಿ ಅಲ್ಪ ಏರಿಕೆ ದಾಖಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ 10 ಗ್ರಾಂಗೆ 11 ರೂ. ಏರಿಕೆಯಾಗಿ 53,132 ರೂ.ಗೆ ತಲುಪಿದೆ. ಜಾಗತಿಕ ನಡೆಯಿಂದ ಬೆಲೆಯಲ್ಲಿ ಬದಲಾವಣೆ ಆಗಿದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂಗೆ 53,121 ರೂ.ಯಲ್ಲಿ ಕೊನೆಗೊಂಡಿತ್ತು. ಹಿಂದಿನ ವಹಿವಾಟಿನಲ್ಲಿನ ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 68,349 ರೂ.ಯಷ್ಟಿತ್ತು. ಇಂದು 1,554 ರೂ. ಕುಸಿದು 66,795 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔನ್ಸ್ ಚಿನ್ನವು 1,931 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದ್ದರೆ, ಬೆಳ್ಳಿ ಔನ್ಸ್‌ಗೆ 25.88 ಡಾಲರ್‌ಗಳಷ್ಟಿದೆ.