ನವದೆಹಲಿ: ಕಳೆದ ಕೆಲವು ದಿನಗಳಿಂದ ಸ್ವಲ್ಪ ಮಟ್ಟದ ಏರಿಕೆ ಕಂಡಿದ್ದ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಕಾರಣದಿಂದ ಭಾರತದಲ್ಲಿ ಆಭರಣ ಚಿನ್ನದ ಬೆಲೆ 10 ಗ್ರಾಮ್ಗೆ 160 ರೂಪಾಯಿ ಇಳಿಕೆಯಾಗಿದೆ.
ಬುಧವಾರ 10 ಗ್ರಾಮ್ ಚಿನ್ನಕ್ಕೆ 390 ರೂಪಾಯಿ ಹೆಚ್ಚಾಗಿದ್ದು, 10 ಗ್ರಾಂ ಚಿನ್ನಕ್ಕೆ 160 ರೂಪಾಯಿ ಇಳಿಕೆ ಕಂಡಿದೆ. ಇದರಿಂದಾಗಿ 22 ಕ್ಯಾರೆಟ್ನ ಚಿನ್ನದ ಬೆಲೆ 10 ಗ್ರಾಮ್ 46,490 ರೂಪಾಯಿಯಷ್ಟಾಗಿದೆ.
ಅದೇ ರೀತಿ 10 ಗ್ರಾಮ್ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡಿದೆ. ಬುಧವಾರ 10 ಗ್ರಾಮ್ 24 ಕ್ಯಾರೆಟ್ ಚಿನ್ನದ ಬೆಲೆ 47,650 ರೂಪಾಯಿ ಇತ್ತು. ಇಂದು 10 ಗ್ರಾಮ್ 22 ಕ್ಯಾರೆಟ್ ಚಿನ್ನದ ಬೆಲೆ 47,490 ರೂಪಾಯಿಯಿದೆ.
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ(10 ಗ್ರಾಮ್ಗೆ)
- ಬೆಂಗಳೂರು- 44,350 ರೂಪಾಯಿ
- ಚೆನ್ನೈ- 44,740 ರೂಪಾಯಿ
- ನವದೆಹಲಿ- 46,500 ರೂಪಾಯಿ
- ಕೋಲ್ಕತಾ- 46,850 ರೂಪಾಯಿ
- ಮುಂಬೈ-46,490 ರೂಪಾಯಿ
- ಹೈದರಾಬಾದ್- 44,350 ರೂಪಾಯಿ
ಬೆಳ್ಳಿಯ ಬೆಲೆ: ಭಾರತೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಇಂದು ಏರಿಕೆ ಕಂಡಿದೆ. ಒಂದು ಕೆಜಿಗೆ 600 ರೂಪಾಯಿ ಹೆಚ್ಚಾಗಿದೆ. ಬುಧವಾರ ಒಂದು ಕೆಜಿ ಬೆಳ್ಳಿಗೆ 62,800 ರೂಪಾಯಿ ಇತ್ತು. ಇಂದು ಬೆಳ್ಳಿಯ ಬೆಲೆ ಕೆಜಿಗೆ 63,400 ರೂಪಾಯಿಯಿದೆ.
ಇದನ್ನೂ ಓದಿ: ಯುಕೆಪಿ, ತಮಿಳುನಾಡು ನದಿ ಜೋಡಣೆ ವಿರುದ್ಧ ಹೊಸ ಪಿಟಿಷನ್ ಸಲ್ಲಿಸಲು ನಿರ್ಧಾರ: ಸಿಎಂ ಬೊಮ್ಮಾಯಿ