ETV Bharat / business

ಬಂಗಾರ ನಿ ಬಲು ಭಾರ: ಏಕಾಏಕಿ ಗಗನಕ್ಕೆ ಜಿಗಿದ ಹಳದಿ ಲೋಹ, 10 ಗ್ರಾಂ. ಚಿನ್ನದ ಬೆಲೆ ಕೇಳಿದ್ರೆ.. - ಬಂಗಾರ

ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ ₹ 1,155 ದರ ಏರಿಕೆಯಾಗಿ 44,383ರಲ್ಲಿ ಮಾರಾಟ ಆಗುತ್ತಿದೆ. ಮಂಗಳವಾರದ ಚಿನಿವಾರ ಪೇಟೆಯಲ್ಲಿ ₹ 43,228 ದರದಲ್ಲಿ ಚಿನ್ನದ ಮಾರಾಟ ನಡೆಯುತ್ತಿತ್ತು.

Gold Price
ಚಿನ್ನದ ದರ
author img

By

Published : Mar 4, 2020, 5:39 PM IST

ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ರೂಪಾಯಿ ಮೌಲ್ಯದ ಕುಸಿತ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಚಿನ್ನದ ಮೇಲೆ ಹೂಡಿಕೆಯಿಂದಾಗಿ ಚಿನ್ನಾಭರಣದ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ.

ದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ ₹ 1,155 ದರ ಏರಿಕೆಯಾಗಿ 44,383ರಲ್ಲಿ ಮಾರಾಟ ನಡೆಯುತ್ತಿದೆ. ಮಂಗಳವಾರದ ಚಿನಿವಾರ ಪೇಟೆಯಲ್ಲಿ ₹ 43,228 ದರದಲ್ಲಿ ಮಾರಾಟ ಆಗುತ್ತಿತ್ತು.

ಬಂಗಾರದ ನಡೆಯನ್ನು ಅನುಸರಿಸಿದ ಬೆಳ್ಳಿಯ ದರದಲ್ಲೂ ಕೂಡ ಪ್ರತಿ ಕೆ.ಜಿ. ಮೇಲೆ 1,198 ರೂ. ಹೆಚ್ಚಳವಾಗಿ ₹ 47,729ಯಲ್ಲಿ ಖರೀದಿ ಆಗುತ್ತಿದೆ. ಕಳೆದ ವಹಿವಾಟಿನ ದಿನದಂದು ₹ 46,531 ದರದಲ್ಲಿ ಮಾರಾಟ ನಡೆಯುತ್ತಿತ್ತು.

ದರ ಏರಿಕೆಗೆ ಕಾರಣವೇನು?

ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನ ₹ 1,155 ಏರಿಕೆ ಆಗಲು ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಇಳಿಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುತ್ತಿರುವ ಚಿನ್ನದ ಖರೀದಿಯೇ ಮುಖ್ಯ ಕಾರಣ. ದಿನದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 15 ಪೈಸೆಯಷ್ಟು ಇಳಿಕೆಯಾಗಿದೆ ಎಂದು ಎಚ್​ಡಿಎಫ್​ಸಿ ಸೆಕ್ಯುರಿಟ್​ ವಿಶ್ಲೇಷಕ ತಪನ್​ ಪಟೇಲ್​ ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್​ ಚಿನ್ನ ಮತ್ತು ಬೆಳ್ಳಿಯು ಕ್ರಮವಾಗಿ 1,638 ಡಾಲರ್​ & 17.17 ಡಾಲರ್​ನಲ್ಲಿ ಮಾರಾಟ ಆಗುತ್ತಿವೆ.​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.