ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಕೆಯ ಮಧ್ಯೆ ಕಳೆದೆರಡು ವಾರಗಳಲ್ಲಿ ಚಿನ್ನದ ಬೆಲೆಗಳು ಸುಮಾರು 60,000 ರೂ.ಗಳಿಂದ 52,500 ರೂ.ಗೆ ತೀವ್ರವಾಗಿ ಕುಸಿದಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವ್ಯಾಪಕ ಚಂಚಲತೆಯಿಂದಾಗಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಗಳು ಗಮನಾರ್ಹವಾಗಿ ಇಳಿಕೆ ಆಗಬಹುದು. 60,000 ರೂ. ತಲುಪಿದ್ದ ಬಂಗಾರ ಶುಕ್ರವಾರದಂದು ಪ್ರತಿ 10 ಗ್ರಾಂ.ಗೆ 52,155 ರೂ.ಗೆ ತಗ್ಗಿದೆ.
ಗೋಲ್ಡ್ ಇಟಿಎಫ್ ಸರಕು ಆಧಾರಿತ ಮ್ಯೂಚುವಲ್ ಫಂಡ್ (ಎಂಎಫ್) ಅನ್ನು ಷೇರುಗಳಂತೆ ಷೇರು ವಿನಿಮಯ ಕೇಂದ್ರಗಳಲ್ಲಿ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಈ ವಿನಿಮಯ ವಹಿವಾಟು ಉತ್ಪನ್ನದಲ್ಲಿ ಹಣವನ್ನು ಒಟ್ಟು ಮೊತ್ತದಲ್ಲಿ ಅಥವಾ ಪ್ರತಿ ತಿಂಗಳು ಹೂಡಿಕೆ ಮಾಡಬಹುದು.
ಯಾವುದೇ ಬೆಲೆಗೆ ಚಿನ್ನ ಖರೀದಿಸುವುದು ದೀರ್ಘಾವಧಿಯಲ್ಲಿ ಲಾಭದಾಯಕವಾಗಲಿದೆ. ಚಿನ್ನವನ್ನು ಎರಡು ರೀತಿಯಲ್ಲಿ ಹೂಡಿಕೆ ಮಾಡಬಹುದು. ಭೌತಿಕವಾಗಿ ಚಿನ್ನ ಖರೀದಿಸುವುದು ಮತ್ತೊಂದು ಲಾಭಕ್ಕಾಗಿ ಚಿನ್ನದ ಇಟಿಎಫ್‌ನಲ್ಲಿ ಹೂಡಿಕೆ ಮಾಡುವುದು.
ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಪ್ರಕಾರ, ಚಿನ್ನದ ಬೆಲೆಗಳು ಶುಕ್ರವಾರದ ವಹಿವಾಟಿನಂದು ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ. ಮೇಲೆ 252 ರೂ. ಇಳಿಕೆಯಾಗಿ 52,155 ರೂ.ಗೆ ಕುಸಿದಿದೆ. ಗುರುವಾರ (ಆಗಸ್ಟ್ 27) ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ.ಗೆ 52,407 ರೂ. ಆಗಿದ್ದು, ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 462 ರೂ.ಗಳಿಂದ 68,492 ರೂ.ಗೆ ತಲುಪಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಚಿನ್ನಾಭರಣ ಬೆಲೆಗಳು ಇನ್ನಷ್ಟು ಕ್ಷೀಣಿಸಬಹುದು ಅನ್ನೋದು ಮಾರುಕಟ್ಟೆ ತಜ್ಞರ ಮಾತು.