ETV Bharat / business

ಆಭರಣ ಪ್ರಿಯರಿಗೆ ಆಘಾತ: ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; $ ಎದುರು ಮುಗ್ಗರಿಸಿದ ₹ - ಬಂಗಾರದ ಬೆಲೆಯಲ್ಲಿ ಏರಿಕೆ

ಚಿನಿವಾರ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡು ಬರುತ್ತಿದೆ. ಇಂದು ಕೂಡ ಆಭರಣ ಪ್ರೀಯರಿಗೆ ಶಾಕ್​ ಕಾದಿತ್ತು.

Gold price
Gold price
author img

By

Published : Jul 2, 2021, 7:46 PM IST

ನವದೆಹಲಿ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದ್ದು, ಇಂದು 251 ರೂ. ಏರಿಕೆಯಾಗಿದೆ. ಈ ಮೂಲಕ 10 ಗ್ರಾಂ ಚಿನ್ನದ ಬೆಲೆ 46,615 ರೂ.ಗೆ ತಲುಪಿದೆ.

ಬೆಳ್ಳಿ ಬೆಲೆಯಲ್ಲಿ ದಾಖಲೆ ಮಟ್ಟದ ಇಳಿಕೆ ಕಂಡುಬಂದಿದ್ದು, ಇಂದು 256 ರೂ ಕಡಿಮೆಯಾಗಿದೆ. ಹೀಗಾಗಿ ಸದ್ಯ ಒಂದು ಕೆ.ಜಿ ಬೆಳ್ಳಿ ಬೆಲೆ 68,458 ರೂ. ಆಗಿದೆ. ಈ ಹಿಂದಿನ ಬೆಲೆ 68,714 ರೂ. ಇತ್ತು. ಉಳಿದಂತೆ 24 ಕ್ಯಾರೆಟ್​ ಚಿನ್ನದ ಬೆಲೆ ಸದ್ಯ 47,190 ರೂ ಆಗಿದ್ದು, 22 ಕ್ಯಾರೆಟ್​ ಬಂಗಾರ 46,190 ರೂ.ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್​ ಬಂಗಾರದ ಬೆಲೆ 44,220 ರೂಗಳಿಗೆ ವ್ಯಾಪಾರವಾಗುತ್ತಿದ್ದು, 24 ಕ್ಯಾರೆಟ್​ ಬಂಗಾರದ ಬೆಲೆ 47,220 ರೂ ಆಗಿದೆ.

ಡಾಲರ್​ ಎದುರು ರೂಪಾಯಿ ಬೆಲೆ ಕುಸಿತ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್​ ಎದುರು ರೂಪಾಯಿ ಮೌಲ್ಯ 20 ಪೈಸೆ ಇಳಿಕೆಯಾಗಿದೆ. ಸದ್ಯ ಡಾಲರ್​ ಎದುರು ರೂಪಾಯಿ ಮೌಲ್ಯ 74 ರೂಪಾಯಿ 75 ಪೈಸೆ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.