ETV Bharat / business

ಚಿನ್ನದ ಬೆಲೆಯಲ್ಲಿ ಹಳೆ ದಾಖಲೆ ಧೂಳಿಪಟ: ಜ್ಯುವೆಲ್ಲರಿಗೆ ಹೋಗುವ ಮುನ್ನ ಯೋಚಿಸಿ..! - ಅಮೆರಿಕ- ಚೀನಾದ ವಾಣಿಜ್ಯ ಸಮರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರದ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ ₹ 1,113 ಏರಿಕೆ ಆಗಿದ್ದು, ₹ 37,920ಯಲ್ಲಿ ಮಾರಾಟ ಆಗುತ್ತಿದೆ. ಬಂಗಾರದ ನಡೆಯನ್ನು ಅನುಸರಿಸಿದ ಬೆಳ್ಳಿ ಕೂಡ ಪ್ರತಿ ಕೆ.ಜಿ. ಮೇಲೆ ₹ 650 ಜಿಗಿತಗೊಂಡು ₹ 43,670ರಲ್ಲಿ ವಹಿವಾಟು ನಡೆಸುತ್ತಿದೆ.

ಸಾಂದರ್ಭಿಕ ಚಿತ್ರ
author img

By

Published : Aug 7, 2019, 6:22 PM IST

ನವದೆಹಲಿ: ಶ್ರಾವಣಮಾಸದ ಸಂಭ್ರಮದ ನಡುವೆ ಚಿನಿವಾರ ಪೇಟೆಯಲ್ಲಿ ಚಿನ್ನ ಪ್ರಿಯರಿಗೆ ಆಘಾತ ಉಂಟಾಗಿದೆ. ಬುಧವಾರದ ವಹಿವಾಟಿನಲ್ಲಿ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರದ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಮೇಲೆ ₹ 1,113 ಏರಿಕೆ ಆಗಿದ್ದು, ₹ 37,920ಯಲ್ಲಿ ಮಾರಾಟ ಆಗುತ್ತಿದೆ. ಬಂಗಾರದ ನಡೆಯನ್ನು ಅನುಸರಿಸಿದ ಬೆಳ್ಳಿ ಕೂಡ ಪ್ರತಿ ಕೆ.ಜಿ. ಮೇಲೆ ₹ 650 ಜಿಗಿತಗೊಂಡು ₹ 43,670ರಲ್ಲಿ ವಹಿವಾಟು ನಡೆಸುತ್ತಿದೆ.

ಸಾಗರೋತ್ತರ ಮಾರುಕಟ್ಟೆಗಳಿಗೆ ಹೂಡಿಕೆಯ ಸುರಕ್ಷೆಯ ದೃಷ್ಟಿಯಿಂದ ಚಿನ್ನದ ಖರೀದಿಯ ಬೇಡಿಕೆ ಹೆಚ್ಚಳವಾಗಿದೆ. ಜೊತೆಗೆ ಅಮೆರಿಕ- ಚೀನಾದ ವಾಣಿಜ್ಯ ಸಮರ ಯಥಾವತ್ತಾಗಿ ಮುಂದುವರೆದಿದೆ. ದೇಶಿಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದರಿಂದ ಬೆಲೆಯಲ್ಲಿ ಹೆಚ್ಚಳವಾಗಿ ಸಾರ್ವಕಾಲಿಕ ಏರಿಕೆ ದಾಖಲಿಸಿದೆ ಎಂದು ವ್ಯಾಪಾರಿಗಳು ವಿಶ್ಲೇಷಿಸಿದ್ದಾರೆ.

ದೇಶಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ. ಚಿನ್ನವು ₹ 37,920 ಬೆಲೆಗೆ ಮಾರಾಟ ಆಗುತ್ತಿರುವುದು ಇದೇ ಮೊದಲು. ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆ ಏರಿಕೆ ಆಗುತ್ತಲೇ ಸಾಗುತ್ತಿದೆ ಎಂದು ಆಲ್ ಇಂಡಿಯಾ ಸರಫಾ ಸಂಘಟನೆಯ ವ್ಯಾಪಾರಿಗಳು ಹೇಳಿದ್ದಾರೆ.

ದೆಹಲಿಯಲ್ಲಿ ಶೇ 99.9 ಮತ್ತು ಶೇ 99.5 ಶುದ್ಧತೆಯ 10 ಗ್ರಾಂ. ಚಿನ್ನದ ಮೇಲೆ ಕ್ರಮವಾಗಿ ₹ 1,130 & 1,115 ಏರಿಕೆಯಾಗಿ ₹ 37,920 & ₹ 37,750ರಲ್ಲಿ ಮಾರಾಟ ಆಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.