ನವದೆಹಲಿ: ಜಾಗತಿಕ ಅಮೂಲ್ಯ ಲೋಹಗಳ ಮಾರಾಟ ಮತ್ತು ರೂಪಾಯಿ ಮೆಚ್ಚುಗೆಗೆ ಅನುಗುಣವಾಗಿ ದೆಹಲಿಯಲ್ಲಿ ಚಿನ್ನದ ದರ ಶುಕ್ರವಾರದ ವಾಹಿವಾಟಿನಂದು 10 ಗ್ರಾಂ. ಮೇಲೆ 205 ರೂ. ತಗ್ಗಿ 47,910 ರೂ.ಗೆ ಇಳಿದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ ಗರಿಷ್ಠ 48,115 ರೂ.ಯಲ್ಲಿ ಮಾರಾಟ ಆಗುತ್ತಿತ್ತು. ಬೆಳ್ಳಿ ಪ್ರತಿ ಕೆ.ಜಿ. ಮೇಲೆ 61 ರೂ. ಹೆಚ್ಚಳವಾಗಿ 70,521 ರೂ.ಗೆ ತಲುಪಿದೆ.
ಇದನ್ನೂ ಓದಿ: ಐತಿಹಾಸಿಕ ದರದ ಹೊಸ್ತಿಲಲ್ಲಿ ಪೆಟ್ರೋಲ್ ರೇಟ್: ಯಾವ ನಗರದಲ್ಲಿ ಎಷ್ಟು ದರವಿದೆ?
ದೆಹಲಿಯಲ್ಲಿ 24 ಕ್ಯಾರೆಟ್‌ಗಳ ಸ್ಪಾಟ್ ಚಿನ್ನದ ಬೆಲೆಗಳು ಕಾಮೆಕ್ಸ್ ಚಿನ್ನ ಮತ್ತು ರೂಪಾಯಿ ಮೆಚ್ಚುಗೆಯೊಂದಿಗೆ 205 ರೂ.ಗೆ ಇಳಿದಿವೆ" ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕು) ತಪನ್ ಪಟೇಲ್ ಹೇಳಿದ್ದಾರೆ.
ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಭಾರತದ ರೂಪಾಯಿ ಮೌಲ್ಯವು 18 ಪೈಸೆ ಏರಿಕೆಯಾಗಿ 72.42 ರೂ. ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,891 ಡಾಲರ್ ಮತ್ತು ಬೆಳ್ಳಿ ಔನ್ಸ್‌ಗೆ 27.67 ಡಾಲರ್‌ಗೆ ಸಮತಟ್ಟಾಗಿದೆ.