ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗುರುವಾರದಂದು ಚಿನ್ನದ ಬೆಲೆಯು 10 ಗ್ರಾಂ.ಗೆ 121 ರೂ.ಯಷ್ಟು ಇಳಿಕೆಯಾಗಿ 50,630 ರೂ.ಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ. ಗೆ 50,751 ರೂ.ಯಷ್ಟಿತ್ತು. ಅದೇ ರೀತಿ ಹಿಂದಿನ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಪ್ರತಿ ಕೆ.ಜಿ.ಗೆ 61,375 ರೂ. ಇದ್ದದ್ದು 1,277 ರೂ. ಇಳಿದು 60,098 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಔನ್ಸ್‌ಗೆ 1,878 ಡಾಲರ್‌ಗೆ ಏರಿಕೆಯಾಗಿದ್ದು, ಬೆಳ್ಳಿ ಔನ್ಸ್‌ಗೆ 23.30 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.
ಸದೃಢವಾದ ಡಾಲರ್ ಚೇತರಿಕೆಯೊಂದಿಗೆ ಚಿನ್ನದ ಬೆಲೆಗಳು ಒತ್ತಡದಲ್ಲಿ ವಹಿವಾಟು ನಡೆಸಿದವು. ಇದು ಚಿನ್ನದ ಸುರಕ್ಷಿತ ಸ್ವರ್ಗದ ಬೇಡಿಕೆ ಕುಂಠಿತಗೊಳಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.