ನವದೆಹಲಿ: ಕ್ಷಣ ಕ್ಷಣವೂ ಬದಲಾಗುವ ಬಂಗಾರದ ದರ ಒಮ್ಮೆ ಆಕಾಶಕ್ಕೆ ಏರುತ್ತಾ, ಮರುಕ್ಷಣವೇ ನೆಲಕ್ಕೆ ವಾಲುತ್ತ ಹಾವು-ಏಣಿಯಂತೆ ಸಾಗುತ್ತಿದೆ. ಆದರೆ, ಕೆಲವು ತಿಂಗಳ ಹಿಂದೆಯಷ್ಟೇ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದ್ದ ಇದೇ ಚಿನ್ನ ಈಗ ನೆಲದತ್ತ ಮುಖ ಮಾಡಿದೆ. ಗರಿಷ್ಠ ಮಟ್ಟದಲ್ಲಿದ್ದಾಗ ಖರೀದಿಸಿದ್ದವರು ಈಗಿನ ಬೆಲೆ ಕಂಡು ಕೈಕೈ ಹಿಸುಕಿಕೊಳ್ಳುವಂತಾಗಿದೆ.
2020ರಲ್ಲಿ ಕೋವಿಡ್-19 ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಯನ್ನು ಆವರಿಸಿದೆ ಎಂಬ ಅನಿಶ್ಚಿತತೆಯು ಹೂಡಿಕೆದಾರರು ಚಿನ್ನದಂತಹ ಸುರಕ್ಷಿತ ಸ್ವತ್ತುಗಳತ್ತ ಧಾವಿಸಿದ್ದರು. ಇದರಿಂದ ಕಳೆದ ವರ್ಷ ಆಗಸ್ಟ್ 7ರಂದು ಹಳದಿ ಲೋಹ ಪ್ರತಿ 10 ಗ್ರಾಂ. ದರ ದೆಹಲಿಯಲ್ಲಿ ದಾಖಲೆಯ ಮಟ್ಟ 57,008 ರೂ.ಯಲ್ಲಿತ್ತು. ಅಂದಿನಿಂದ ಚಿನ್ನವು ಕ್ರಮೇಣ ಕುಸಿಯುತ್ತಲೇ ಇದೆ.
2021ರ ಮಾರ್ಚ್ 4ರಂದು 10 ತಿಂಗಳ ಕನಿಷ್ಠ 44,768 ರೂ.ಗೆ ಇಳಿಯಿತು. ಈ ಹತ್ತು ತಿಂಗಳಲ್ಲಿ ಚಿನ್ನವೂ ಸರಿಸುಮಾರು 11,500 ರೂ. ಇಳಿಕೆಯಾಗಿದೆ. ಈ ವರ್ಷದ ಆರಂಭದಿಂದಲೇ ಚಿನ್ನದ ಬೆಲೆ 5,000 ರೂ.ಗಿಂತಲೂ ಕಡಿಮೆಯಾಗಿದೆ. ಆಗಸ್ಟ್‌ನ ಗರಿಷ್ಠ ಮಟ್ಟದಿಂದ ಸುಮಾರು 11,500 ರೂ. ಕಳೆದ ವಹಿವಾಟಿನಂದು ಚಿನ್ನವು ಜಾಗತಿಕ ಮಾರುಕಟ್ಟೆಗಳಲ್ಲಿ ಔನ್ಸ್‌ಗೆ 1,711 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಇದು ಒಂಬತ್ತು ತಿಂಗಳ ಕನಿಷ್ಠ ದರವಾಗಿದೆ.
ಗರಿಷ್ಠ ಮಟ್ಟ ತಲುಪಿದ್ದ ಚಿನ್ನ ನೆಲ ಮುಟ್ಟುತ್ತಿರುವುದೇಕೆ?
1. ಹಲವು ಮಾರುಕಟ್ಟೆ ವಿಶ್ಲೇಷಕರು ಚಿನ್ನದ ಇಳಿಕೆಗೆ ತಮ್ಮದೇ ಆದ ಅಭಿಪ್ರಾಯಗಳನ್ನು ನೀಡಿದ್ದಾರೆ. ಹಳದಿ ಲೋಹದ ಬೆಲೆಯಲ್ಲಿ ನಿರಂತರ ಕುಸಿತ ಹೆಚ್ಚಾಗಲು ಅಮೆರಿಕದ ಟ್ರೆಸರಿ ಯೀಲ್ಡ್ ಕಾರಣವಾಗಿದೆ. ಬೆಂಚ್‌ಮಾರ್ಕ್ ಯುಎಸ್ ಟ್ರೆಸರಿ ಯೀಲ್ಡ್, ಕಳೆದ ವಾರ ಕುಸಿದಿದ್ದು, ಈಗ ಶೇ 1.5ರಷ್ಟು ಸ್ಥಿರವಾಗಿದೆ. ಆರಂಭದಿಂದಲೂ ಬಾಂಡ್ ಯೀಲ್ಡ್ ಮತ್ತು ಚಿನ್ನದ ಬೆಲೆಗಳ ನಡುವೆ ನಕಾರಾತ್ಮಕ ಸಂಬಂಧವಿದೆ. ಅಂದರೆ, ಬಾಂಡ್ ದರ ಮತ್ತು ಚಿನ್ನದ ದರಗಳ ನಡುವೆ ಸಕಾರಾತ್ಮಕ ಸಂಬಂಧವಿದೆ ಎಂದು ಹೇಳಬಹುದು.
2. ಬಾಂಡ್ ಇಳುವರಿಯನ್ನು ಸರಳವಾಗಿ ಹೇಳುವುದಾದರೆ, ಒಂದು ಬಾಂಡ್‌ಗೆ ಶೇಕಡಾವಾರು ಪ್ರಮಾಣದಲ್ಲಿ ವ್ಯಕ್ತಪಡಿಸುವ ಹೂಡಿಕೆಯ ಲಾಭ. ಬಾಂಡ್‌ಗಳ ಮೇಲಿನ ಬಡ್ಡಿದರಗಳಾಗಿದ್ದು, ಚಿನ್ನದಂತೆ ಅಸ್ತಿತ್ವದಲ್ಲಿಲ್ಲ. ಚಿನ್ನ ಮತ್ತು ಟ್ರೆಸರಿ ಸುರಕ್ಷಿತ ಸ್ವತ್ತುಗಳೆಂದು ಪರಿಗಣಿಸಲಾಗಿದ್ದು, ಚಿನ್ನ ಹಿಡಿದಿಟ್ಟುಕೊಳ್ಳಲು ಅವಕಾಶ (ಅಪಾರ್ಚುನಿಟಿ) ವೆಚ್ಚ ಉಂಟಾಗುತ್ತದೆ. ಬಾಂಡ್ ಇಳುವರಿ ಹೆಚ್ಚಾದಾಗ ವೆಚ್ಚವೂ ಹೆಚ್ಚಾಗುತ್ತದೆ. ಹೂಡಿಕೆದಾರರನ್ನು ಚಿನ್ನದ ಹೂಡಿಕೆಯಿಂದ ಟ್ರೆಸರಿಯತ್ತ ಬದಲಾಗಲು ಪ್ರೇರೇಪಿಸುತ್ತದೆ. ಇದು ಈಗ ಪರಿಣಾಮಕಾರಿಯಾಗಿ ನಡೆಯುತ್ತಿದೆ, ಚಿನ್ನದ ನಿರಂತರ ಕುಸಿತ ಕರಡಿ ಮಾರುಕಟ್ಟೆಗೆ ಕಾರಣವಾಗುತ್ತದೆ.
ಇದನ್ನೂ ಓದಿ: ವಿವಿಧ ದೇಶಗಳಿಗೆ ಉಚಿತ ಲಸಿಕೆ ಪೂರೈಕೆ: ಭಾರತದ ಔದಾರ್ಯ ಕೊಂಡಾಡಿದ ಕೆರಿಬಿಯನ್, ಆಫ್ರಿಕನ್ ರಾಷ್ಟ್ರಗಳು
3. ಇತರೆ ಅಂಶಗಳನ್ನು ಹೇಳುವುದಾದರೆ, ನಿರ್ಬಂಧ ತೆಗೆದುಹಾಕುವ ಮತ್ತು ಭಾರತದಲ್ಲಿ ಈಗ ನಡೆಯುತ್ತಿರುವ ಕೋವಿಡ್ ವ್ಯಾಕ್ಸಿನ್ ಕಾರ್ಯಕ್ರಮದ ಪ್ರಾರಂಭಿಕ ಯಶಸ್ವಿಯ ನಂತರದ ಬೆಳವಣಿಗೆಯು ಹೆಚ್ಚು ಸಕಾರಾತ್ಮಕ ಸೂಚನೆಗಳನ್ನು ತೋರಿಸಿದೆ. ಈ ಚೇತರಿಕೆಯು ದೊಡ್ಡ ಸ್ಥೂಲ ಆರ್ಥಿಕತೆ ಜೊತೆ ತಳುಕು ಹಾಕಿಕೊಂಡಿದೆ.
4. ಸಂಕಷ್ಟದ ವೇಳೆ ಹೂಡಿಕೆದಾರರು ಸಾಮಾನ್ಯವಾಗಿ ಚಿನ್ನದಂತಹ ಸುರಕ್ಷಿತ ಸ್ವತ್ತುಗಳತ್ತ ವಾಲುತ್ತಾರೆ. ಆದರೆ ಆರ್ಥಿಕತೆಯು ಸ್ಥಿರವಾಗುತ್ತಿದ್ದಂತೆ ಹಾಗೂ ಈ ಹಿಂದೆ ಚಾಲ್ತಿಯಲ್ಲಿದ್ದ ಅಪಾಯಗಳ ನಿವಾರಣೆ ಆಗುತ್ತಿದೆ ಎಂಬ ಭಾವನೆ ಮೂಡುತ್ತಿದ್ದಂತೆ ಹೂಡಿಕೆದಾರರು ಈಕ್ವಿಟಿಗಳಂತಹ ಹೂಡಿಕೆ ಸಾಮರ್ಥ್ಯದ ಮೇಲೆ ಹೆಚ್ಚಿನ ಲಾಭದೊಂದಿಗೆ ಮತ್ತಷ್ಟು ಅಪಾಯಕಾರಿ ಸ್ವತ್ತುಗಳತ್ತ ಮೊರೆಹೋಗುತ್ತಾರೆ. ಹೂಡಿಕೆಯ ಹಾದಿಯುದ್ದಕ್ಕೂ ಕೆಲವು ಸುಳಿವು ಕಂಡುಬಂದರೂ ಈಕ್ವಿಟಿ ಮಾರುಕಟ್ಟೆಗಳಲ್ಲಿನ ವಹಿವಾಟು.
5. ದೇಶವು ಕೋವಿಡ್-19 ವೈರಸ್ ವಿರುದ್ಧ ಬಲವಾದ ಹಿಡಿತ ಸಾಧಿಸುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಮುಂಬರುವ ವಿವಾಹದ ಋತುವಿನಲ್ಲಿ ಚಿನ್ನದ ಬೇಡಿಕೆಯು ಗಮನಾರ್ಹವಾಗಿ ಏರಿಕೆಯಾಗುವ ಸಾಧ್ಯತೆಯಿದೆ. ಚಿನ್ನದ ಬೆಲೆಗಳನ್ನು ಮೇಲಕ್ಕೆ ಜಿಗಿಯಲಿವೆ.