ಮುಂಬೈ: ದೇಶಿ ಚಿನಿವಾರ ಪೇಟೆಯಲ್ಲಿ ಕೊರೊನಾ ವೈರಸ್ ಭೀತಿಯ ನಡುವೆ ಗುರುವಾರ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಧಾರಣೆಯಲ್ಲಿ ಏರಿಕೆ ದಾಖಲಾಗಿದೆ.
ಎಂಸಿಎಕ್ಸ್ ಗೋಲ್ಡ್ ಫ್ಯೂಚರ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ. ಬಂಗಾರದ ಮೇಲೆ ಶೇ 1ರಷ್ಟು (400 ರೂ.) ಏರಿಕೆಯಾಗಿ ₹ 40,772ಯಲ್ಲಿ ಮಾರಾಟ ಆಗುತ್ತಿದೆ. ಬೆಳ್ಳಿಯ ಧಾರಣೆ ಸಹ ಪ್ರತಿ ಕೆ.ಜಿ. ಮೇಲೆ ಶೇ 1.7ರಷ್ಟು (600 ರೂ.) ಹೆಚ್ಚಳವಾಗಿ ₹ 40,700ಗೆ ಖರೀದಿಯಾಗುತ್ತಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಗೋಲ್ಡ್ ದರ ಅಲ್ಪ ಏರಿಕೆ ಕಂಡುಬಂದಿದೆ. 'ಕೊರೊನಾ ವೈರಸ್ ಚೀನಾದ ಅಲ್ಪಾವಧಿ ಆರ್ಥಿಕತೆಯ ಮೇಲೆ ನಕರಾತ್ಮಕ ಪರಿಣಾಮ ಬೀರಿದೆ' ಎಂದು ಅಮೆರಿಕದ ಫೆಡರಲ್ ರಿಸರ್ವ್ ಹೇಳಿಕೆ ನೀಡಿದ್ದು ಬೆಲೆ ಏರಿಕೆಗೆ ಉತ್ತೇಜನ ನೀಡಿದೆ. ಜಾಗತಿಕ ಪೇಟೆಯಲ್ಲಿ ಪ್ರತಿ ಔನ್ಸ್ ಚಿನ್ನ 1,578 ಡಾಲರ್ಗೆ ಮಾರಾಟ ಆಗುತ್ತಿದ್ದರೆ ಬೆಳ್ಳಿ ಶೇ 0.3ರಷ್ಟು ಹೆಚ್ಚಳವಾಗಿ 17.58 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.