ETV Bharat / business

ಗೋವಾ ಪ್ರಿಯರೇ ಎಚ್ಚರ... ಈ ಗ್ರಾಮದಲ್ಲಿ ಒಂದು ಫೋಟೋಗೆ 500 ರೂ. ತೆರಿಗೆ... ಅಂತಹದ್ದೇನಿದೆ ಇಲ್ಲಿ?

ಪ್ರವಾಸಿಗರು ಮತ್ತು ಸ್ಥಳೀಯರು ಉತ್ತರ ಗೋವಾದ ಹಳ್ಳಿಯಲ್ಲಿ ರಸ್ತೆಯ ಮೇಲೆ ಛಾಯಾಚಿತ್ರ ಅಥವಾ ವಿಡಿಯೋ ತೆಗೆದರೆ ಸ್ವಚ್ಛತಾ ತೆರಿಗೆ ಅಥವಾ ಛಾಯಾಗ್ರಹಣ ತೆರಿಗೆ ಪಾವತಿಸಬೇಕಾಗುತ್ತದೆ.

ಗೋವಾ
author img

By

Published : Nov 6, 2019, 3:29 PM IST

ಪಣಜಿ: ದಿವಂಗತ ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರ ಪೂರ್ವಜರ ಗ್ರಾಮ ಎಂದೇ ಖ್ಯಾತರಾಗಿರುವ ಪರ್ರಾ ಗ್ರಾಮದಲ್ಲಿ ತೆಂಗಿನಕಾಯಿ ಸುಂದರವಾದ ಭೂದೃಶ್ಯ ಸೆರೆ ಹಿಡಿಯುವ ಫೋಟೋಗೆ ತೆರಿಗೆ ವಿಧಿಸಲಾಗುತ್ತಿದೆ.

ಪ್ರವಾಸಿಗರು ಮತ್ತು ಸ್ಥಳೀಯರು ಉತ್ತರ ಗೋವಾದ ಹಳ್ಳಿಯಲ್ಲಿ ರಸ್ತೆಯ ಮೇಲೆ ಛಾಯಾಚಿತ್ರ ಅಥವಾ ವಿಡಿಯೋ ತೆಗೆದರೆ ಸ್ವಚ್ಛತಾ ತೆರಿಗೆ ಅಥವಾ ಛಾಯಾಗ್ರಹಣ ತೆರಿಗೆ ಪಾವತಿಸಬೇಕಾಗುತ್ತದೆ. ಪರ್ರಾ ಗ್ರಾಮ ಪಂಚಾಯಿತಿಯ ತೆರಿಗೆ ವಿಧಿಸುವ ನಡೆಯನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಶುಲ್ಕವು ಪ್ರವಾಸಿಗರ ಭೇಟಿಗೆ ತೊಡಕಾಗಲಿದೆ ಎಂದು ಆರೋಪಿಸಿದ್ದಾರೆ.

ಪರ್ರಾ ಗ್ರಾಮದಲ್ಲಿ ಪ್ರವಾಸಿಗರ ಮೇಲೆ ಅನಾವಶ್ಯಕ ತೆರಿಗೆ ವಿಧಿಸಲಾಗುತ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಸ್ಥಳೀಯ ನಿವಾಸಿ ಪಾಲ್ ಫರ್ನಾಂಡಿಸ್ ಮಾತನಾಡಿದ್ದಾರೆ. ನನ್ನ ಕೆಲವು ಸಂಬಂಧಿಕರಿಗೆ ಪಂಚಾಯತಿಯಿಂದ ₹ 500 ಶುಲ್ಕ ವಿಧಿಸಿದಾಗ ಹೊಸ ತೆರಿಗೆಯ ಬಗ್ಗೆ ತಿಳಿದುಬಂದಿದೆ. ಛಾಯಾಚಿತ್ರಕ್ಕೆ ₹ 500 ತೆರಿಗೆ ಪಡೆಯುವುದು ದೊಡ್ಡ ತಪ್ಪು ಎಂದರು.

ದೇಶದಲ್ಲಿ ಎಲ್ಲಿಯೂ ಛಾಯಾಗ್ರಹಣಕ್ಕೆ ಶುಲ್ಕವಿಲ್ಲ. ಗೋವಾದಾದ್ಯಂತ ಸುಂದರವಾದ ಸ್ಥಳಗಳಿವೆ. ಪ್ರವಾಸೋದ್ಯಮಕ್ಕೆ ಉತ್ತಮವಲ್ಲದ ಅನೇಕ ಹಳ್ಳಿಗಳಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿವೆ. ಪಂಚಾಯಿತಿಯು ತನ್ನ ವಾಣಿಜ್ಯ ಚಟುವಟಿಕೆಗಳಿಗೆ ಶುಲ್ಕ ವಿಧಿಸುವ ಎಲ್ಲ ಹಕ್ಕಿದೆ. ಆದರೆ ವ್ಯಕ್ತಿಗಳಿಗೆ ಶುಲ್ಕ ವಿಧಿಸುವುದು ನ್ಯಾಯವಲ್ಲ ಎಂದು ಪರ್ರಾ ಗ್ರಾ.ಪಂ. ಮಾಜಿ ಸದಸ್ಯ ಬೆನೆಡಿಕ್ಟ್ ಡಿಸೋಜಾ ಹೇಳಿದರು.

ಈ ರಸ್ತೆಯು ಅನೇಕ ಬಾಲಿವುಡ್ ಮತ್ತು ಅಂತಾರಾಷ್ಟ್ರೀಯ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ. ಇಲ್ಲಿನ ಸುಂದರವಾದ ಸೌಂದರ್ಯದಿಂದಾಗಿ ಅನೇಕ ಪ್ರವಾಸಿಗರು ಬರುತ್ತಾರೆ. ಪಂಚಾಯಿತಿ ಅವರು ಶುಲ್ಕ ವಿಧಿಸುವುದು ತಪ್ಪು. ಇದು ದೇವರು ಕೊಟ್ಟ ಸೌಂದರ್ಯ. ಇದರ ಮೇಲೆ ತೆರಿಗೆ ಹಾಕುವುದು ಸರಿಯಲ್ಲ ಎಂದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.