ETV Bharat / business

ಡೊನಾಲ್ಡ್ ಟ್ರಂಪ್​ ಹೊಸ ರಾಗಕ್ಕೆ ಜಾಗತಿಕ ಪೇಟೆಯಲ್ಲಿ ಅಲ್ಲೋಲ ಕಲ್ಲೋಲ..!

ಕೋವಿಡ್- 19​ ಸೋಂಕಿನ ಪ್ರಭಾವದಿಂದ ಉದ್ಭವಿಸಿರುವ ಅಮೆರಿಕದ ಆರ್ಥಿಕ ಹಿಂಜರಿಕೆಯನ್ನು ಹಿಮ್ಮೆಟ್ಟಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ಘೋಷಿಸಿದರು. ಶ್ವೇತ ಭವನ 1 ಟ್ರಿಲಿಯನ್ ಡಾಲರ್​ನ ಪ್ರಸ್ತಾವನೆಯನ್ನು ಇರಿಸಿತು. ತತ್ಪರಿಣಾಮ ವಾಲ್​ ಸ್ಟ್ರೀಟ್ ಫ್ಯೂಚರ್ ಗರಿಷ್ಠ ಶೇ 5ರಷ್ಟು ಇಳಿಕೆಯಾಗಿದೆ.

US
ಯುಎಸ್​
author img

By

Published : Mar 18, 2020, 8:25 PM IST

ನ್ಯೂಯಾರ್ಕ್​: 'ಅಮೆರಿಕ ಸೀನಿದರೆ ಭಾರತದ ಮಾರುಕಟ್ಟೆಗೆ ಶೀತವಾಗುತ್ತದೆ' ಎಂಬ ಮಾತಿನಂತೆ ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ ಘೋಷಣೆ ಭಾರತ ಮಾತ್ರವಲ್ಲದೇ ಜಾಗತಿಕ ಷೇರುಪೇಟೆಗಳ ಮೇಲೆ ಪ್ರಭಾವ ಬೀರಿದೆ.

ಕೋವಿಡ್- 19​ ಸೋಂಕಿನ ಪ್ರಭಾವದಿಂದ ಉದ್ಭವಿಸಿರುವ ಅಮೆರಿಕದ ಆರ್ಥಿಕ ಹಿಂಜರಿಕೆಯನ್ನು ಹಿಮ್ಮೆಟ್ಟಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ಘೋಷಿಸಿದರು. ಶ್ವೇತ ಭವನ 1 ಟ್ರಿಲಿಯನ್ ಡಾಲರ್​ನ ಪ್ರಸ್ತಾವನೆಯನ್ನು ಇರಿಸಿತು. ತತ್ಪರಿಣಾಮ ವಾಲ್​ ಸ್ಟ್ರೀಟ್ ಫ್ಯೂಚರ್ ಗರಿಷ್ಠ ಶೇ 5ರಷ್ಟು ಇಳಿಕೆಯಾಗಿದೆ.

ಕೊರೊನಾ ವೈರಸ್​ನಿಂದ ವ್ಯಾಪಾರ- ವಹಿವಾಟಿಕೆ ಸ್ಥಗಿತವಾದ ಪರಿಣಾಮ ಉಂಟಾದ ನಷ್ಟ ಪ್ರಮಾಣ ನಿವಾರಿಸಲು ಶ್ವೇತಭವನದ ಪ್ರಸ್ತಾಪವು 1 ಟ್ರಿಲಿಯನ್ ಡಾಲರ್​ ಖರ್ಚಾಗಬಹುದು ಎಂದಿದೆ. ಫೆಡರಲ್ ರಿಸರ್ವ್ ಹಣಕಾಸು ಮಾರುಕಟ್ಟೆಗಳನ್ನು ಕಾರ್ಯನಿರ್ವಹಿಸಲು ಹೆಚ್ಚಿನ ಕ್ರಮಗಳನ್ನು ಘೋಷಿಸಿದೆ. ಮುಂದಿನ ಎರಡು ವಾರಗಳಲ್ಲಿ ಅಮೆರಿಕನ್ನರಿಗೆ ಬೆಂಬಲ ನೀಡಲು ಸಹಾಯ ಮಾಡಲು ಚೆಕ್ ಕಳುಹಿಸಲು ಟ್ರಂಪ್ ಬಯಸಿದ್ದಾರೆ. ಆದರೆ, ಆರ್ಥಿಕತೆಯ ಹೆಚ್ಚಿನ ವಲಯಗಳು ಸ್ಥಗಿತಗೊಳ್ಳುವ ಸನಿಹದಲಿವೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಟೀವನ್ ಮ್ಯೂಚಿನ್ ಹೇಳಿದ್ದಾರೆ.

ವಹಿವಾಟು, ತೆರಿಗೆ ಮುಂದೂಡಿಕೆ, ಅಡಮಾನ ಪರಿಹಾರ ಮತ್ತು ಅನುದಾನಗಳಿಗಾಗಿ ಟ್ರಿಲಿಯನ್​ ಡಾಲರ್ ಮೊತ್ತದಷ್ಟು ಸಾಲ ನೀಡಲಿದೆ. ಟ್ರಂಪ್‌ರ ಪ್ರಸ್ತಾವನೆಯಲ್ಲಿ ಸಣ್ಣ ಉದ್ಯಮಗಳಿಗೆ 250 ಬಿಲಿಯನ್ ಮತ್ತು ವಿಮಾನಯಾನ ಸಂಸ್ಥೆಗಳಿಗೆ 50 ಬಿಲಿಯನ್ ಸಾಲ ಸಹ ಸೇರಿದೆ.

ಕೊರೊನಾ ವೈರಸ್​ನಿಂದ ಆರ್ಥಿಕ ಹಾನಿಯು ಇನ್ನಷ್ಟು ಹೆಚ್ಚಾಗುವ ಭೀತಿಯಿಂದಾಗಿ ಬುಧವಾರದ ವಹಿವಾಟಿನಲ್ಲಿ ಅಮೆರಿಕದ ವಾಲ್ ಸ್ಟ್ರೀಟ್​ ಸ್ಟಾಕ್​ ತೀವ್ರವಾಗಿ ಕುಸಿದಿದ್ದು, ಡೌಜೋನ್ಸ್​ 1,200 ಪಾಯಿಂಟ್ ಅಥವಾ ಶೇ 6ರಷ್ಟು ಕ್ಷೀಣಿಸಿದೆ.

ಲಂಡನ್ ಮತ್ತು ಫ್ರಾಂಕ್‌ಫರ್ಟ್‌ನಲ್ಲಿನ ಮಾರುಕಟ್ಟೆಗಳು ಸುಮಾರು ಶೇ 5ರಷ್ಟು ಮತ್ತು ಏಷ್ಯಾದ ಶಾಂಘೈ, ಟೋಕಿಯೊ ಮತ್ತು ಹಾಂಗ್ ಕಾಂಗ್‌ನ ಮಾರುಕಟ್ಟೆಗಳು ತೀರ ಕೆಳಮಟ್ಟದಲ್ಲಿ ವಹಿವಾಟು ನಡೆಸಿದವು. ಭಾರತದ ಬಿಎಸ್​ಇ ಹಾಗೂ ಎನ್​ಎಸ್​ಇ 1,709 ಮತ್ತು 427.75 ಅಂಶಗಳ ಕುಸಿತ ಕಂಡಿದೆ. ಸಿಯೋಲ್​ ಶೇ 4.9ರಷ್ಟು ಹಾಗೂ ಆಸ್ಟ್ರೇಲಿಯಾದ ಎಸ್​&ಪಿ- ಎಎಸ್​ಎಕ್ಸ್​ 200 ಅಂಶಗಳು ಇಳಿಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.