ನವದೆಹಲಿ: ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ರಾಜಕೀಯ ನಾಯಕರು ಚಾರ್ಟರ್ ವಿಮಾನಗಳನ್ನು ಯಥೇಚ್ಛವಾಗಿ ಬಳಸುತ್ತಿರುವುದರಿಂದ ವಿಮಾನಯಾನ ಸಾರಿಗೆ ಲಾಭದತ್ತ ಮುಖಮಾಡಿದೆ.
ಉದ್ದಿಮೆಯಲ್ಲಿನ ಕೆಲವು ಅಹಿತಕರ ಘಟನೆಯಿಂದ ನಕರಾತ್ಮಕ ಹಾದಿಯಲ್ಲಿ ಸಾಗುತ್ತಿದ್ದ ವಿಮಾನಯಾನ ಸಾರಿಗೆ, ಲೋಕಸಭೆ ಚುನಾವಣೆಯು ಋಣಾತ್ಮಕ ಮಾರ್ಗದಲ್ಲಿ ಸಾಗುವಂತೆ ಮಾಡಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಶೇ 11.2ರಷ್ಟು ಚಾರ್ಟ್ ಫ್ಲೈಟ್ಗಳ ಬೇಡಿಕೆ ವೃದ್ಧಿಗೊಂಡಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ದತ್ತಾಂಶದ ಪ್ರಕಾರ, 2019ರ ಮಾರ್ಚ್ನಲ್ಲಿ 24,229 ವಿಮಾಗಳು ಹಾರಾಟ ನಡೆಸಿವೆ. ಕಳೆದ ಹಣಕಾಸು ವರ್ಷದ ಇದೇ ತಿಂಗಳಲ್ಲಿ 24,229 ವಿಮಾನಗಳು ಹಾರಾಟ ನಡೆಸಿದ್ದವು. ಮಾರ್ಚ್ ತಿಂಗಳ ವಿಮಾನ ಸಾರಿಗೆಯ ಬೆಳವಣಿಗೆಯು ಈ ಹಿಂದಿನ 6 ತಿಂಗಳಲ್ಲಿನ ಅತ್ಯಧಿಕ ಏರಿಕೆಯಾಗಿದೆ. ಎರಡು ತಿಂಗಳ ಲಾಭಾಂಶದ ಪ್ರಮಾಣ ಶೇ 100ರಷ್ಟು ತಲುಪಿದೆ.
ನಮ್ಮ ಎಲ್ಲ ವಿಮಾನಗಳು ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಅವಿಶ್ರಾಂತ ಹಾರಾಟ ನಡೆಸಿವೆ. ಈ ಎರಡು ತಿಂಗಳು ಈ ವರ್ಷದ ಅತ್ಯುತ್ತಮ ತಿಂಗಳು. ಚುನಾವಣೆಯ ಸಂದರ್ಭದಲ್ಲಿ ವಿಮಾನಗಳ ಹಾರಾಟ ಸಕ್ರಿಯವಾಗಿದೆ. ಜೊತೆಗೆ ನಿರ್ವಾಹಕರಿಗೆ ಹೆಚ್ಚಿನ ಅವಧಿಯ ಕೆಲಸ ದೊರೆತಿದೆ. ಸಾಮಾನ್ಯ ತಿಂಗಳಲ್ಲಿ ಫ್ಲೈಟ್ಗಳ ಬೇಡಿಕೆ ಶೇ 80ರಷ್ಟು ಇರುತ್ತದೆ. ಆದರೆ, ಈ ಎರಡು ಮಾಸಿಕದಲ್ಲಿ ಶೇ 100ರಷ್ಟು ಬೇಡಿಕೆ ಕಂಡುಬಂದಿದೆ ಎಂದು ಕ್ಲಬ್ ಒನ್ ಏರ್ನ ಹಿರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜನ್ ಮೆಹ್ರಾ ಅವರು ಹೇಳಿದ್ದಾರೆ.
ಕ್ಲಬ್ ಒನ್ ದೇಶದಲ್ಲಿ ಅತಿದೊಡ್ಡ ವಿಮಾನ ನಿರ್ವಾಹಕ ಸಂಸ್ಥೆಯಾಗಿದ್ದು, ಐಷರಾಮಿ ಜೆಟ್ಗಳನ್ನು ಒದಗಿಸುತ್ತಿದೆ. ದೆಹಲಿ ಮೂಲದ ಈ ಸಂಸ್ಥೆ 10 ವಿಮಾನಗಳನ್ನು ಹೊಂದಿದ್ದು, ಇದರಲ್ಲಿ ಸಿಆರ್ಜೆ-100, ಫಾಲ್ಕನ್- 2000 ಮತ್ತು ಸೆಸ್ನಾ ಸೈಟೇಷನ್ ಎಕ್ಸೆಲ್ನಂತಹ ಐಷಾರಾಮಿ ವಿಮಾನಗಳಿವೆ.