ನವದೆಹಲಿ: ತಾಜಾ ಮೀನು ಮತ್ತು ಮಾಂಸದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ರೆಶ್ ಟು ಹೋಮ್ ಪ್ರತಿ ಸೆಕೆಂಡಿಗೆ ಸುಮಾರು ಒಂದು ಆರ್ಡರ್ ಪಡೆಯುತ್ತಿದ್ದು, ಇದು ಸಾರ್ವಕಾಲಿಕ ಗರಿಷ್ಠ ಆರ್ಡರ್ ಆಗಿದೆ ಎಂದು ವರದಿಯಾಗಿದೆ.
ಫ್ರೆಶ್ ಟು ಹೋಮ್ ಬ್ರಾಂಡ್ ಎಂಟು ಲಕ್ಷಕ್ಕೂ ಹೆಚ್ಚು ಹೊಸ ಮಾಂಸ ಪ್ರಿಯರನ್ನು ತನ್ನತ್ತ ಸೆಳೆದಿದೆಯಂತೆ. 2021 ರಲ್ಲಿ ಅದರ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಕ್ರಮವಾಗಿ ಚಿಕನ್, ಮಟನ್, ಮೀನು ಮತ್ತು ಸೀಗಡಿಗಳ ಆರ್ಡರ್ಗಳನ್ನು ಹೆಚ್ಚು ಪಡೆದಿದೆ ಎಂದು ಫ್ರೆಶ್ ಟು ಹೋಮ್ ಹೇಳಿಕೊಂಡಿದೆ.
ವರದಿಯ ಪ್ರಕಾರ, ಈ ಉದ್ಯಮವು ಹಲವು ಆಸಕ್ತಿದಾಯಕ ಮತ್ತು ವಿಕಸನಗೊಳ್ಳುತ್ತಿರುವ ಪ್ರವೃತ್ತಿಗಳನ್ನು ಬಹಿರಂಗಪಡಿಸುತ್ತಿದೆಯಂತೆ. ಇದೇ ವೇಳೆ, 2021 ರಲ್ಲಿ ನಾವು ಪ್ರತಿ ಸೆಕೆಂಡಿಗೆ 1 ಆರ್ಡರ್ ಸ್ವೀಕರಿಸಿದ್ದೇವೆ ಎಂದು FreshToHome ಸಹ-ಸಂಸ್ಥಾಪಕ ಮತ್ತು CEO ಶಾನ್ ಕಡವಿಲ್ ತಿಳಿಸಿದ್ದಾರೆ.
ದೇಶದಾದ್ಯಂತ ಚಿಕನ್ ಮೇಲೆ ಜನರ ಪ್ರೀತಿ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿದೆ. ಏಕೆಂದರೆ ಎಲ್ಲೆಡೆ ಹೆಚ್ಚು ಆರ್ಡರ್ ಮಾಡಿದ ಉತ್ಪನ್ನವಾಗಿದೆ. ಮೀನುಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ ಇದೆ ಎಂದು ಕಡವಿಲ್ ಹೇಳಿದ್ದಾರೆ.