ETV Bharat / business

ತೈಲ ದರ ಹೆಚ್ಚಳದಿಂದ ಕಂಪ್ರೈಸ್ಡ್​​ ನ್ಯಾಚುರಲ್​ ಗ್ಯಾಸ್​​ ಚಾಲಿತ ವಾಹನಗಳಿಗೆ ಶುಕ್ರದೆಸೆ: ವರದಿ

author img

By

Published : Jan 26, 2021, 8:44 PM IST

ಹೆಚ್ಚಿನ ಅಬಕಾರಿ ಸುಂಕದಿಂದಾಗಿ ಈ ಹೆಚ್ಚಳವು 2020ರಲ್ಲಿ 13 ರೂ.ನಿಂದ 32.98 ರೂ.ಗೆ ಏರಿದೆ. ಇದರಲ್ಲಿ ಮೌಲ್ಯವರ್ಧಿತ ತೆರಿಗೆಯೂ ಸೇರಿದೆ. ತೆರಿಗೆಯು ಈಗ ಪೆಟ್ರೋಲ್​ನ ಚಿಲ್ಲರೆ ಮಾರಾಟದ ಬೆಲೆಯಲ್ಲಿ 60 ಪ್ರತಿಶತದಷ್ಟು ಪಾಲು ಹೊಂದಿದೆ. ಇದು 2019ರಲ್ಲಿ ಶೇ. 47ರಷ್ಟಿತ್ತು ಎಂದು ಕ್ರಿಸಿಲ್ ರಿಸರ್ಚ್ ನಿರ್ದೇಶಕ ಹೆತಾಲ್ ಗಾಂಧಿ ಹೇಳಿದ್ದಾರೆ.

petrol prices
petrol prices

ನವದೆಹಲಿ: ಇತ್ತೀಚಿನ ದಿನಗಳಲ್ಲಿ ತೆರಿಗೆ ಹೆಚ್ಚಳದಿಂದಾಗಿ ಪೆಟ್ರೋಲ್‌ ಬೆಲೆ ಏರಿಕೆಯಾಗಿದ್ದರಿಂದ ಕಂಪ್ರೇಸ್ಡ್​ ನ್ಯಾಚುರಲ್​ ಗ್ಯಾಸ್​ (ಸಿಎನ್‌ಜಿ) ಚಾಲಿತ ವಾಹನಗಳ ಅಳವಡಿಕೆ ಸಹ ಹೆಚ್ಚಾಗಲಿದೆ ಎಂದು ಕ್ರಿಸಿಲ್ ರಿಸರ್ಚ್ ತಿಳಿಸಿದೆ.

ಈ ಹಿಂಂದೆ 2018ರ ಅಕ್ಟೋಬರ್​ನಲ್ಲಿ ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80.5 ಡಾಲರ್​​ ಇದ್ದಾಗ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 80 ರೂ. ದಾಟಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಬ್ರೆಂಟ್ ಪ್ರತಿ ಬ್ಯಾರೆಲ್‌ಗೆ 55ಕ್ಕೆ ಇಳಿದಿದ್ದರೂ ಸಹ ಬೆಲೆ ಈಗ ದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ 85.2 ರೂ.ಗೆ ತಲುಪಿದೆ.

ಸಾರ್ವಜನಿಕ ಖರ್ಚುಗಳನ್ನು ಹೆಚ್ಚಿಸಲು ಸರ್ಕಾರವು ಹಣದ ಮೂಲ ಹುಡುಕಬೇಕಾಗಿದೆ. ಸ್ವಚ್ಛ ಇಂಧನಗಳ ಬಳಕೆಗೆ ಉತ್ತೇಜಿಸುತ್ತಿದ್ದು, ಪೆಟ್ರೋಲ್ ಮೇಲಿನ ತೆರಿಗೆ ಯಾವುದೇ ಯಾವುದೇ ಕಾರಣಕ್ಕೂ ಹಿಂದಿನ ಹಂತಕ್ಕೆ ಇಳಿಯುವ ಸಾಧ್ಯತೆಯಿಲ್ಲ ಎಂದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ಅಬಕಾರಿ ಸುಂಕದಿಂದಾಗಿ ಸರ್ಕಾರವು 1.4 ಲಕ್ಷ ಕೋಟಿ ರೂ. ಆದಾಯ ಗಳಿಸುವ ನಿರೀಕ್ಷೆಯಿದೆ. ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಪ್ರಮಾಣವು ಶೇ. 10-16ರಷ್ಟು ಕಡಿಮೆಯಾಗಬಹುದು. ಇದಲ್ಲದೆ 2021ರಲ್ಲಿ ಬ್ರೆಂಟ್​ ಕಚ್ಚಾ ತೈಲವು ಬ್ಯಾರೆಲ್‌ಗೆ ಸರಾಸರಿ 23-5ರಷ್ಟು ಏರಿಕೆಯಾಗಲಿದೆ. 2020ರಲ್ಲಿ ಬ್ಯಾರೆಲ್‌ಗೆ 42.3 ಡಾಲರ್​ನಿಂದ 50-55 ಡಾಲರ್​ಗೆ ತಲುಪಿತ್ತು. ಅಂದರೆ 2020ರ ಡಿಸೆಂಬರ್ ಸರಾಸರಿ ಮುಕ್ತಾಯದ ಬೆಲೆಗಿಂತ ಶೇ. 4ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಡೆಡ್ಲಿ ಕೊರೊನಾ ವಿರುದ್ಧ ವೈದ್ಯರ ಸಮರ.. ನಿರ್ಮಲಾ ಬಜೆಟ್​ನಲ್ಲಿ ಡಾಕ್ಟರ್ಸ್​ ನಿರೀಕ್ಷೆಗಳೇನು?

ದೇಶೀಯ ಅನಿಲ ಬೆಲೆಗಳು 2021ರ ಕ್ಯಾಲೆಂಡರ್ ವರ್ಷದಲ್ಲಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಯುನಿಟ್​ಗೆ (ಎಂಬಿಟಿಯು) ಶೇ. 20ರಷ್ಟು ಹೆಚ್ಚಳವಾಗಿ 2.5-3.5 ಡಾಲರ್​ಗೆ ಏರಿಕೆಯಾಗುವ ನಿರೀಕ್ಷೆಯಿದೆ. 2020ರಲ್ಲಿ 2.45 ಡಾಲರ್​ನಷ್ಟಿತ್ತು.

ಈ ಏರಿಕೆಯು ಸಹಜವಾಗಿ ದೇಶೀಯ ಅನಿಲ ಬೆಲೆಗಳಲ್ಲಿನ ಶೇಕಡಾವಾರು ಹೆಚ್ಚಳವನ್ನು ಹೋಲುತ್ತದೆ. ಹೆಚ್ಚಿನ ತೆರಿಗೆಯಿಂದಾಗಿ ಪೆಟ್ರೋಲ್ ಮತ್ತು ಸಿಎನ್‌ಜಿ ಚಿಲ್ಲರೆ ಬೆಲೆಗಳು ಏರಿಕೆಯಾಗುತ್ತಿವೆ. ಸರ್ಕಾರವು ನಗರ ಅನಿಲ ವಿತರಣೆ (ಸಿಜಿಡಿ) ಜಾಲಗಳನ್ನು ವಿಸ್ತರಿಸಿ ಸಿಎನ್‌ಜಿ ಬಳಕೆಯನ್ನು ಹೆಚ್ಚಿಸುತ್ತದೆ.

ಸಿಜಿಡಿಯೊಳಗೆ ಸಿಎನ್‌ಜಿ ವಿಭಾಗದ ಬೇಡಿಕೆಯ 40 ಪ್ರತಿಶತದಷ್ಟು ಪಾಲು 2021 ಮತ್ತು 2023ರ ಹಣಕಾಸಿನ ನಡುವೆ ಶೇ. 25ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ ದಾಖಲಿಸುವ ನಿರೀಕ್ಷೆಯಿದೆ. ಪ್ರಸ್ತುತ ಸಿಎನ್‌ಜಿ ವಾಹನಗಳು ದೇಶದಲ್ಲಿ ವಾರ್ಷಿಕವಾಗಿ ಮಾರಾಟವಾಗುವ ಪ್ರಯಾಣಿಕರ ವಾಹನಗಳ ಪೈಕಿ ಕೇವಲ 5 ಪ್ರತಿಶತದಷ್ಟಿದೆ.

ಭಾರತ್ ಸ್ಟೇಜ್​ VI ಮಾನದಂಡಗಳ ಅನುಷ್ಠಾನದೊಂದಿಗೆ ಡೀಸೆಲ್ ವಾಹನಗಳ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, ಹೆಚ್ಚಿನ ವಾಣಿಜ್ಯ ಉದ್ಯಮಿಗಳು ಸಿಎನ್‌ಜಿ ಕಡೆಗೆ ವಾಲುತ್ತಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ಸುಮಾರು 1.8 ಲಕ್ಷ ಸಿಎನ್‌ಜಿ ಕಾರುಗಳು ಮಾರಾಟವಾಗಿವೆ. 2015ರ ಹಣಕಾಸು ವರ್ಷದಲ್ಲಿ 1.4 ಲಕ್ಷಕ್ಕೆ ಮಾರಾಟವಾಗಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.