ETV Bharat / business

ಸ್ವಚ್ಛ ಭಾರತ 2.0: ಬಜೆಟ್​ನಲ್ಲಿ 1,41,678 ಕೋಟಿ ರೂ. ಘೋಷಣೆ - ಕೇಂದ್ರ ಬಜೆಟ್​ ಸ್ವಚ್ಛ ಭಾರತ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ 2021-22ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದು, ಇದರಲ್ಲಿ 1,41,678 ಕೋಟಿ ರೂ ಸ್ವಚ್ಛ ಭಾರತ ಅಭಿಯಾನ 2.0 ಗೋಸ್ಕರ ಘೋಷಣೆ ಮಾಡಿದ್ದಾರೆ.

Finance Minister
Finance Minister
author img

By

Published : Feb 1, 2021, 4:25 PM IST

ನವದೆಹಲಿ: 2021-22ನೇ ಸಾಲಿನ ಕೇಂದ್ರ ಬಜೆಟ್ ಘೋಷಣೆಯಾಗಿದ್ದು, ಎಲ್ಲ ವಲಯಗಳಿಗೂ ಆದ್ಯತೆ ನೀಡಿ ನಿರ್ಮಲಾ ಸೀತಾರಾಮನ್​ ಬಜೆಟ್ ಮಂಡನೆ ಮಾಡಿದ್ದಾರೆ. ಪ್ರಮುಖವಾಗಿ ಸ್ವಚ್ಛ ಅಭಿಯಾನ 2.0 ಮಿಷನ್​ಗೆ ಕೇಂದ್ರ ಹಣಕಾಸು ಸಚಿವೆ 1,41,678 ಕೋಟಿ ರೂಪಾಯಿ ಘೋಷಣೆ ಮಾಡಿದ್ದಾರೆ.

ಓದಿ: ದೇಶದ ಅಭಿವೃದ್ಧಿಗೆ ಬಜೆಟ್​ ಪೂರಕ, ರೈತರ ಆದಾಯ ದ್ವಿಗುಣಕ್ಕೆ ಆದ್ಯತೆ: ಕೇಂದ್ರ ಬಜೆಟ್​ ಮೆಚ್ಚಿದ ಮೋದಿ

2020ರ ಬಜೆಟ್​ನಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕಾಗಿ 12,300 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಈ ಸಲ ಹೆಚ್ಚಿನ ಹಣ ಮೀಸಲಿಡಲಾಗಿದೆ. ಅರ್ಬನ್ ಕ್ಲೀನ್ ಇಂಡಿಯಾ ಮಿಷನ್​ಗೋಸ್ಕರ ಇಷ್ಟೊಂದು ಹಣ ನೀಡುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಜಲಜೀವನ್ ಮಿಷನ್ ಅರ್ಬನ್ ಗೆ 2.87 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖವಾಗಿ 42 ನಗರ ಪ್ರದೇಶಗಳಿಗಾಗಿ 2,217 ಕೋಟಿ ರೂ ಮೀಸಲಿಡಲಾಗಿದ್ದು, ವಾಯು ಮಾಲಿನ್ಯ ಸಮಸ್ಯೆ ಬಗೆಹರಿಸಲು ಈ ಹಣ ಬಳಕೆ ಮಾಡಲಾಗುವುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.