ETV Bharat / business

ಅಗ್ಗದ ಬೆಲೆಯ ಇಂಡಿಯಾ ಮೇಡ್ ಮೈಕ್ರೊಮ್ಯಾಕ್ಸ್ ಸ್ಮಾರ್ಟ್​ಫೋನ್​.. ಫೀಚರ್, ಲಾಂಚ್​ ದಿನಾಂಕ ಹೀಗಿದೆ.. - ಮೈಕ್ರೊಮ್ಯಾಕ್ಸ್​ ಕಡಿಮೆ ಬೆಲೆ ಫೋನ್

ಐಎನ್-1 ಭಾರತೀಯ ಚಿತ್ರರಂಗದಿಂದ ಸ್ಫೂರ್ತಿ ಪಡೆದಿದ್ದು, ಸೂಪರ್​ಹಿಟ್ ಚಲನಚಿತ್ರದಂತೆ ನಾವು ನಿಮಗೆ ತಡೆರಹಿತ, ಸುರಕ್ಷಿತ ಮತ್ತು ಆನಂದಕರ ಅನುಭವದ ಅತ್ಯುತ್ತಮ ತಂತ್ರಜ್ಞಾನ ಹಾಗೂ ಉತ್ತಮ ವೈಶಿಷ್ಟ್ಯಗಳನ್ನು ಸಂಯೋಜಿಸಿ ಸ್ಮಾರ್ಟ್​​ಫೋನ್​ ನೀಡಲು ಪ್ರಯತ್ನಿಸಿದ್ದೇವೆ..

tech-gadgets-micromax
tech-gadgets-micromax
author img

By

Published : Mar 20, 2021, 4:12 PM IST

ನವದೆಹಲಿ : ದೇಶೀಯ ಸ್ಮಾರ್ಟ್‌ಫೋನ್ ಬ್ರಾಂಡ್ ಮೈಕ್ರೊಮ್ಯಾಕ್ಸ್‌ನ ಐಎನ್ ಮೊಬೈಲ್‌, ಅಗ್ಗದ ಬೆಲೆಯ ಹೊಸ ಸ್ಮಾರ್ಟ್‌ಫೋನ್ ಐಎನ್ 1 ಎರಡು ಮಾಡಲ್​ಗಳಲ್ಲಿ ಬಿಡುಗಡೆ ಮಾಡಿದೆ.

4 ಜಿಬಿ+ 64 ಜಿಬಿ ಹೊಂದಿರುವ ಸ್ಮಾರ್ಟ್‌ಫೋನ್ ದರ 9,999 ರೂ. ಮತ್ತು 6 ಜಿಬಿ +128 ಜಿಬಿ ಮಾಡಲ್​ನ ನೇರಳೆ ಮತ್ತು ನೀಲಿ ಬಣ್ಣದ ಮೊಬೈಲ್​ಗೆ 11,499 ರೂ. ನಿಗದಿಪಡಿಸಿದೆ.

ಮೈಕ್ರೊಮ್ಯಾಕ್ಸ್ ಸ್ಮಾರ್ಟ್​ಫೋನ್..

ಐಎನ್-1 ಭಾರತೀಯ ಚಿತ್ರರಂಗದಿಂದ ಸ್ಫೂರ್ತಿ ಪಡೆದಿದ್ದು, ಸೂಪರ್​ಹಿಟ್ ಚಲನಚಿತ್ರದಂತೆ ನಾವು ನಿಮಗೆ ತಡೆರಹಿತ, ಸುರಕ್ಷಿತ ಮತ್ತು ಆನಂದಕರ ಅನುಭವದ ಅತ್ಯುತ್ತಮ ತಂತ್ರಜ್ಞಾನ ಹಾಗೂ ಉತ್ತಮ ವೈಶಿಷ್ಟ್ಯಗಳನ್ನು ಸಂಯೋಜಿಸಿ ಸ್ಮಾರ್ಟ್​​ಫೋನ್​ ನೀಡಲು ಪ್ರಯತ್ನಿಸಿದ್ದೇವೆ ಎಂದು ಮೈಕ್ರೋಮ್ಯಾಕ್ಸ್ ಇಂಡಿಯಾದ ಸಹ-ಸ್ಥಾಪಕ ರಾಹುಲ್ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಕ್ರೊಮ್ಯಾಕ್ಸ್ ಐನ್​-1 ಫೀಚರ್​ಗಳು

  • ಐಎನ್- 1 6.67-ಇಂಚಿನ ಹೆಚ್​ಡಿ+ ಪಂಚ್-ಹೋಲ್ ಡಿಸ್​​ಪ್ಲೇ ಹೊಂದಿದೆ
  • ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ 48 ಎಂಪಿ ಪ್ರೈಮರಿ ಸೆನ್ಸಾರ್, 2 ಎಂಪಿ ಡೆಪ್ತ್ ಸೆನ್ಸಾರ್ ಮತ್ತು 2 ಎಂಪಿ ಮ್ಯಾಕ್ರೋ ಸೆನ್ಸಾರ್ ಹೊಂದಿದೆ
  • ಹೆಚ್ಚಿನ ಪಿಕ್ಸೆಲ್ ಜತೆ 8 ಎಂಪಿ ಸೆಲ್ಫಿ ಕ್ಯಾಮೆರಾ
  • ಆರ್ಮ್ ಕಾರ್ಟೆಕ್ಸ್-ಎ 75 ಮತ್ತು -ಎ 55 ಸಿಪಿಯು ಜತೆ ಮೀಡಿಯಾ ಟೆಕ್ ಹೆಲಿಯೊ ಜಿ 80 ಹೊಂದಿದೆ
  • ಇಂಟರ್​ನಲ್ ಮೆಮೊರಿ 256ಜಿಬಿ
  • 5000mAh ಬ್ಯಾಟರಿ

micromaxinfo.com ಹಾಗೂ ಫ್ಲಿಪ್​ಕಾರ್ಟ್​ನಲ್ಲಿ ಮಾರ್ಚ್​ 26ರ ಮಧ್ಯಾಹ್ನ 12 ಗಂಟೆಯಿಂದ ಗ್ರಾಹಕರಿಗೆ ಲಭ್ಯವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.