ಮುಂಬೈ: ಲೋಕಸಮರದ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಷೇರುಪೇಟೆಯಲ್ಲಿ ಭಾರಿ ಏರಿಕೆ ದಾಖಲಾಗಿದೆ.
ಮೊನ್ನೆ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಳ್ಳುತ್ತಿದ್ದಂತೆ 1400 ಅಂಶ ದಾಖಲಿಸಿ ಇತಿಹಾಸ ಬರೆದಿದ್ದ ಮುಂಬೈ ಷೇರುಪೇಟೆ ಇಂದು ಎನ್ಡಿಎ ಅಧಿಕಾರ ಹಿಡಿಯುವ ಲಕ್ಷಣಗಳು ಗೋಚರಿಸುತ್ತಿದ್ದಂತೆ ಭಾರಿ ಮುನ್ನಡೆ ಪಡೆಯಿತು.
ಹತ್ತು ಗಂಟೆಯ ಒಳಗೆ ಸುಮಾರು 780 ಅಂಕಗಳಿಗಿಂತ ಹೆಚ್ಚು ಜಿಗಿತ ಕಂಡ ಸೆನ್ಸಕ್ಸ್ ಹೂಡಿಕೆದಾರರಲ್ಲಿ ಭಾರಿ ಲಾಭ ಮಾಡಿಕೊಟ್ಟಿತ್ತು. ಹನ್ನೊಂದರ ವೇಳೆಗೆ 921ಗಳಷ್ಟು ಏರಿಕೆ ಕಂಡ ಸೆನ್ಸೆಕ್ಸ್ ಹೂಡಿಕೆದಾರರ ಭಾರಿ ಹುಮ್ಮಸ್ಸು ತಂದಿದೆ. ಮೋದಿ ಸರ್ಕಾರ ಅಧಿಕಾರದತ್ತ ಎಂಬ ಸುದ್ದಿಕೇಳಿ ಷೇರುಗಳ ಖರೀದಿಯಲ್ಲಿ ನಿರತರಾಗಿದ್ದಾರೆ.
ಈ ಮೂಲಕ ಷೇರುಪೇಟೆ ಸಂವ್ಯೇದಿ ಸೂಚ್ಯಂಕ 40 ಸಾವಿರದ ಗಡಿ ದಾಟಿ ಮುನ್ನುಗ್ಗುತ್ತಿದೆ. ಇನ್ನು ನಿಫ್ಟಿ ಸಹ 200 ಅಂಕಗಳಿಗಿಂತ ಮೇಲೇರಿತ್ತು. ಒಟ್ಟಿನಲ್ಲಿ ಷೇರುಪೇಟೆ ಸದ್ಯ ಹಬ್ಬದ ವಾತಾವರಣದಲ್ಲಿದೆ. ಮಧ್ಯಾಹ್ನದ ಮೇಲೆ ಫಲಿತಾಂಶದ ಆಧಾರದ ಮೇಲೆ ಪೇಟೆ ಯಾವ ರೀತಿ ಟರ್ನ್ ತೆಗೆದುಕೊಳ್ಳುತ್ತದೋ ಕಾದು ನೋಡಬೇಕಿದೆ.