ಮುಂಬೈ: ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆಯಲ್ಲಿ 9-10 ಪೈಸೆ ಇಳಿಕೆಯಾಗಿದೆ. ಸತತ ನಾಲ್ಕನೇ ದಿನವೂ ಕೆಳಮುಖವಾಗಿ ಪರಿಷ್ಕರಿಸಿದೆ. ಆದರೆ, ಪೆಟ್ರೋಲ್ ದರ ಯಥಾವತ್ತಾಗಿ ಉಳಿದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಡೀಸೆಲ್ ಮೇಲೆ 70.94 ರಿಂದ. 70.71 ರೂ.ಗೆ ಇಳಿದಿದೆ. ಆದರೆ, ಪೆಟ್ರೋಲ್ ದರ 81.06 ರೂಪಾಯಿಗೆ ಮಾರಾಟ ಆಗುತ್ತಿದೆ ಎಂದು ಭಾರತೀಯ ತೈಲ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಲೀಟರ್‌ಗೆ 87.74 ಮತ್ತು ಲೀಟರ್‌ಗೆ 77.12 ರೂ.ಯಲ್ಲಿ ಖರೀದಿ ಆಗುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಶೀಲಿಸುತ್ತವೆ. ಕೋವಿಡ್-19 ಪ್ರಕರಣ ಜಾಗತಿಕ ಹೆಚ್ಚಳ ಮತ್ತು ಮುಂಬರುವ ವಾರಗಳಲ್ಲಿ ತೈಲ ಪೂರೈಕೆ ಏರಿಕೆ ಆಗಲಿರುವುದರಿಂದ ಕಚ್ಚಾ ತೈಲವು ಶುಕ್ರವಾರದಂದು ಶೇ.2ಕ್ಕಿಂತಲೂ ಅಧಿಕ ಕುಸಿದಿದೆ.