ನವದೆಹಲಿ: ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ತೈಲ ಕಂಪನಿಗಳು ಚಿಲ್ಲರೆ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 16 ಪೈಸೆ ಇಳಿಸಿದ್ದು, ಆರು ತಿಂಗಳ ಅವಧಿಯಲ್ಲಿ ಡೀಸೆಲ್ ಬೆಲೆಯನ್ನು ಗುರುವಾರ ಮೊದಲ ಬಾರಿಗೆ ಕಡಿತಗೊಳಿಸಲಾಗಿದೆ.
ತೈಲ ಕಂಪನಿಗಳ ಇಂಧನ ಚಿಲ್ಲರೆ ಬೆಲೆ ಅಧಿಸೂಚನೆಯ ಪ್ರಕಾರ ಡೀಸೆಲ್ ಈಗ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್‌ಗೆ 73.40 ರೂ.ಗಳಷ್ಟಿದೆ. ಆಗಸ್ಟ್ ಮಧ್ಯಭಾಗದಲ್ಲಿ ಆರಂಭವಾಗುವ ದರ ಏರಿಕೆಯ ಎರಡನೇ ರ್ಯಾಲಿಯಲ್ಲಿ ಪೆಟ್ರೋಲ್ ಬದಲಾಗದೆ ಲೀಟರ್ 82.08 ರೂ.ಯಷ್ಟಾಗಿದೆ.
ಇಂಡಿಯನ್ ಆಯಿಲ್ ಕಾರ್ಪ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ದರ ಇಳಿಸಿವೆ.
ಜೂನ್ 7ರ ನಡುವೆ ಡೀಸೆಲ್ ದರ ಲೀಟರ್‌ಗೆ 12.55 ರೂ.ಗಳಷ್ಟು ಏರಿಕೆ ಆಗಿದ್ದು, ತೈಲ ಮಾರಾಟ ಕಂಪನಿಗಳು ತಮ್ಮ ವೆಚ್ಚಕ್ಕೆ ಅನುಗುಣವಾಗಿ ದರ ಪರಿಷ್ಕರಣೆ ಪುನರಾರಂಭಿಸಿದವು. ದೆಹಲಿ ರಾಜ್ಯ ಸರ್ಕಾರವು ತನ್ನ ವ್ಯಾಟ್ ಕಡಿತ ದರವನ್ನು ಪ್ರತಿ ಲೀ.ಗೆ 8.38 ರೂ.ಗೆ ಇಳಿಸಿತ್ತು. ಜುಲೈ 25ರಿಂದ ದೆಹಲಿ ಹೊರತುಪಡಿಸಿ ದೇಶದಲ್ಲಿ ಡೀಸೆಲ್ ಬೆಲೆ ಬದಲಾಗದೆ ಉಳಿದಿದೆ.
ಜೂನ್ 7 ಮತ್ತು ಜೂನ್ 29ರ ನಡುವೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 9.17 ರೂ. ಪರಿಷ್ಕರಣೆ ಚಕ್ರ ಮತ್ತೆ ಆಗಸ್ಟ್ 16ರಂದು ಪ್ರಾರಂಭವಾಯಿತು. ಅಂದಿನಿಂದ ಪೆಟ್ರೋಲ್ ದರ 1.51 ರೂ. ಹಾಗೂ ಜೂನ್ 7ರಿಂದ ಒಟ್ಟಾರೆ 10.68 ರೂ.ಯಷ್ಟು ಹೆಚ್ಚಳವಾಗಿದೆ.
ಮುಂಬೈಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 88.73 ರೂ., ಡೀಸೆಲ್ ಬೆಲೆ 79.94 ರೂ.ಯಷ್ಟಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್- 83.57 ರೂ., ಡೀಸೆಲ್-76.90 ರೂ., ಚೆನ್ನೈನಲ್ಲಿ ಪೆಟ್ರೋಲ್-85.04 ಮತ್ತು ಡೀಸೆಲ್- 78.71 ರೂ. ಇದೆ. ಬೆಂಗಳೂರಿನಲ್ಲಿ 84.75 ರೂ. ಮತ್ತು ಡೀಸೆಲ್ 77.71 ಯಷ್ಟಾಗಿ 17 ಪೈಸೆ ಇಳಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳು ಹಿಂದಿನ 15 ದಿನಗಳಲ್ಲಿ ಬೆಂಚ್‌ಮಾರ್ಕ್ ಇಂಧನದ ಸರಾಸರಿ ಬೆಲೆಯ ಆಧಾರದ ಮೇಲೆ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸುತ್ತಾರೆ.