ನವದೆಹಲಿ: ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಪೆಟ್ರೋಲ್‌ಗಿಂದ ಡೀಸೆಲ್ ದುಬಾರಿಯಾಗುತ್ತಿದೆ. ನಿಧಾನಗತಿಯ ತೈಲ ಬೇಡಿಕೆಯ ಮಧ್ಯೆಯೂ ಅನಿರೀಕ್ಷಿತ ಬೆಲೆ ಏರಿಕೆ ಸಾರ್ವಜನಿಕರನ್ನು ಚಿಂತೇಗೀಡು ಮಾಡಿದೆ.
ತೈಲ ಮಾರಾಟ ಕಂಪನಿಗಳು ಶನಿವಾರ ಲೀಟರ್ ಡೀಸೆಲ್ ಮೇಲೆ 17 ಪೈಸೆ ಏರಿಸಿವೆ. ಪರಿಣಾಮ, ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್- ಡೀಸೆಲ್ ನಡುವಿನ ಅಂತರ ಮತ್ತಷ್ಟು ವಿಸ್ತರಿಸಿದೆ.
ಕಳೆದ ತಿಂಗಳು ಡೀಸೆಲ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಅನ್ನು ಹಿಂದಿಕ್ಕಿತ್ತು. ಈಗಲೂ ಅದೇ ಸ್ಥಾನದಲ್ಲಿ ಮುಂದುವರೆಯುತ್ತಿದೆ.
ರಾಜಧಾನಿಯಲ್ಲಿ ಶನಿವಾರ ಡೀಸೆಲ್ ಬೆಲೆ ಪ್ರತಿ ಲೀಟರ್ 81.52 ರೂ. ಮಾರಾಟ ಆಗುತ್ತಿದೆ. ಈ ಹಿಂದಿನ ಮಟ್ಟವಾದ 81.35 ರೂ.ಯಲ್ಲಿತ್ತು. ಪೆಟ್ರೋಲ್ ಬೆಲೆಯು 80.43 ರೂ.ಯಲ್ಲಿ ಬದಲಾಗದೆ ಉಳಿದಿವೆ. ಇದು ಜೂನ್ 29ರ ಮಟ್ಟಕ್ಕಿಂತ ಹಿಂದಿನ ದಿನಗಳ ಬೆಲೆಗಿಂತ 5 ಪೈಸೆ ಏರಿಕೆಯಾಗಿದೆ.
ದೇಶದ ಇತರ ಮೆಟ್ರೊ ನಗರಗಳಲ್ಲೂ ಡೀಸೆಲ್ ಬೆಲೆ ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ. ಅಲ್ಲಿನ ಸಾರಿಗೆ ಇಂಧನದ ಬೆಲೆ ಪೆಟ್ರೋಲ್‌ಗಿಂತ ಪ್ರತಿ ಲೀಟರ್‌ಗೆ 6-8 ರೂ. ಕಡಿಮೆ ಇದೆ.