ನವದೆಹಲಿ: ಸಾರ್ವಜನಿಕ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ನೀಡುತ್ತಿರುವ ಮನೆ ಬಾಗಿಲಿಗೆ ತೈಲ ವಿತರಣೆ ಸೇವೆಯಡಿ ಡೀಸೆಲ್ ನೀಡುತ್ತಿದ್ದು, ಈಗ ಪೆಟ್ರೋಲ್ ಅನ್ನು ಸೇರ್ಪಡೆಗೊಳಿಸುವ ಚಿಂತನೆ ಇದೆ.
ಪ್ರಸಕ್ತ ಹಣಕಾಸು ವರ್ಷದ ಮುಂದಿನ ತ್ರೈಮಾಸಿಕದ ಒಳಗೆ 20 ಹೆಚ್ಚುವರಿ ನಗರಗಳಿಗೆ ಈ ಸೇವೆ ವಿಸ್ತರಿಸುವ ಗುರಿ ಇರಿಸಿಕೊಂಡಿವೆ. ವರ್ಷ್ಯಾಂತ್ಯದ ವೇಳೆಗೆ ದೇಶದ 500 ನಗರಗಳಿಗೆ ಹೋಂ ಡೆಲಿವರಿ ಜಾಲ ವ್ಯಾಪಿಸಿಕೊಳ್ಳಲಿದೆ.
ಈಗ ಜಾರಿಯಲ್ಲಿರವ ಡೀಸೆಲ್ ವಿತರಣೆ ಸೇವೆಯು ಬಹು ಯಶಸ್ವಿಯಾಗಿದೆ. ನಿಯಮಾವಳಿಗೆ ಬದ್ಧವಾಗಿ ಹಾಗೂ ಸುರಕ್ಷಿತವಾಗಿ ಬಳಕೆದಾರರ ಮನೆಬಾಗಿಲಿಗೆ ಪೆಟ್ರೋಲ್ ಪೂರೈಸಲು ಚಿಂತಿಸುತ್ತಿದ್ದೇವೆ. ಶೀಘ್ರವೇ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಆಯಿಲ್ ವಿತರಕ ಕಂಪನಿಯವರು ಹೇಳಿದ್ದಾರೆ.
ಪ್ರಸ್ತುತ ಡೀಸೆಲ್ ಮಾರಟಕ್ಕೆ ಮಾತ್ರವೇ ಪರವಾನಗಿ ಇದ್ದು, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿಇಎಸ್ಒ) ದೃಢೀಕರಿಸಿದ ಬಲಿಕ ಈ ವ್ಯಾಪ್ತಿಗೆ ಸೇರ್ಪಡೆ ಆಗಲಿದೆ.
ಮುಂಬೈ, ಬೆಂಗಳೂರು, ದೆಹಲಿ, ಉದಯಪುರ, ಜೋಹರ್ತ್, ಚೆನ್ನೈ ಸೇರಿದಂತೆ ಪ್ರಮುಖ 35 ಸಿಟಿಗಳಲ್ಲಿ ಐಒಸಿ, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಕಂಪನಿಗಳು ಸಣ್ಣ ವಾಹನಗಳ ಸಹಾಯದಿಂದ ವಿತರಣಾ ಯಂತ್ರಗಳನ್ನು ಜೋಡಿಸಿ ಗ್ರಾಹಕರ ಮನೆ ಬಾಗಿಲಿಗೆ ಇಂಧನವನ್ನು ತಲುಪಿಸುತ್ತಿವೆ.