ಮುಂಬೈ: ದೇಶೀಯ ಪೇಟೆಗಳು ಸತತ ಮೂರನೇ ಸೇಷನ್ನಲ್ಲೂ ಏರಿಕೆ ಕಂಡಿದ್ದು, ಸೆನ್ಸೆಕ್ಸ್ 49,000 ಗಡಿ ದಾಟಿದ್ದರೇ ನಿಫ್ಟಿ 14,800 ಮಟ್ಟದಲ್ಲಿ ಅಗ್ರಸ್ಥಾನದಲ್ಲಿದೆ.
ಜಾಗತಿಕ ವ್ಯಾಪಾರಿಗಳು ಯುಎಸ್ ಫೆಡರಲ್ ರಿಸರ್ವ್ ನೀತಿ ನಿರ್ಧಾರ ಮತ್ತು ಹಲವು ಬ್ಲೂ ಚಿಪ್ ಕಂಪನಿಗಳಿಂದ ಗಳಿಕೆಗಳ ನವೀಕರಣಗಳ ಮೇಲೆ ದೃಷ್ಟಿನೆಟ್ಟಿವೆ.
ಸೆನ್ಸೆಕ್ಸ್, ನಿಫ್ಟಿ ಮೂರನೇ ದಿನವೂ ಹಸಿರು ಬಣ್ಣದಲ್ಲಿ ಕೊನೆಗೊಂಡಿದೆ. ಮುಂಬೈ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ದಿನದ ವಹಿವಾಟಿನ ಅಂತ್ಯದ ವೇಳೆ 789.70 ಅಂಕ ಜಿಗಿದು 49,733.84 ಅಂಖಗಳ ಮಟ್ಟದಲೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 197.25 ಅಂಕ ಹೆಚ್ಚಳವಾಗಿ 18,850.30 ಅಂಕಗಳಲ್ಲಿ ಕೊನೆಗೊಂಡಿದೆ. ಬ್ಯಾಂಕ್, ಹಣಕಾಸು ಮತ್ತು ಆಟೋ ಷೇರುಗಳ ಲಾಭದಿಂದಾಗಿ ನಿಫ್ಟಿ ಶೇ 1.4ರಷ್ಟ ಹೆಚ್ಚಳವಾಗಿದೆ.
ಐಷರ್ ಮೋಟಾರ್ಸ್, ಇಂಡಸ್ಇಂಡ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರ ಬ್ಯಾಂಕ್, ಎಸ್‌ಬಿಐ, ಮತ್ತು ಬಜಾಜ್ ಆಟೋ 50 ಷೇರುಗಳ ಸೂಚ್ಯಂಕದಲ್ಲಿ ಉತ್ತಮ ಸಾಧನೆ ತೋರಿದವು.
ಬ್ರಿಟಾನಿಯಾ ಇಂಡಸ್ಟ್ರೀಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಲೈಫ್, ನೆಸ್ಲೆ ಇಂಡಿಯಾ, ಎಚ್‌ಸಿಎಲ್ ಟೆಕ್ ಮತ್ತು ಟಾಟಾ ಸ್ಟೀಲ್ ಸಂಸ್ಥೆಯು ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಶೇ 0.5ರಿಂದ ಶೇ 2ರವರೆಗೆ ಷೇರುಗಳು ಕಡಿಮೆ ದರದೊಂದಿಗೆ ಕೊನೆಗೊಂಡವು.
ಯುಎಸ್ ಫೆಡರಲ್ ರಿಸರ್ವ್ ನೀತಿ ಘೋಷಣಯತ್ತ ವ್ಯಾಪಾರಸ್ಥರು ಎದುರು ನೋಡುತ್ತಿದ್ದಾರೆ. ವಿಶ್ವ ಷೇರುಗಳು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಡಾಲರ್ ಮತ್ತು ಜಾಗತಿಕ ಬಾಂಡ್ ಇಳುವರಿ ಬುಧವಾರ ಹೆಚ್ಚಿಸಲಾಯಿತು. ಜಪಾನ್‌ನ ನಿಕ್ಕಿ ಶೇ 0.2ರಷ್ಟು, ದಕ್ಷಿಣ ಕೊರಿಯಾದ ಕೋಸ್ಪಿ ಶೇ 1ರಷ್ಟು, ಆಸ್ಟ್ರೇಲಿಯಾದ ಎಸ್ & ಪಿ / ಎಎಸ್‌ಎಕ್ಸ್ 200 ಸೂಚ್ಯಂಕ ಶೇ 0.44ರಷ್ಟು ಏರಿಕೆ ಕಂಡಿದೆ.