ಮುಂಬೈ: ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕವು ಶುಕ್ರವಾರ ಚಂಚಲ ವಹಿವಾಟು ನಡೆಸಿತು.
ವಾರಾಂತ್ಯದ ಬೆಳಗ್ಗೆ 47,863 ಅಂಕಗಳಲ್ಲಿ ದುರ್ಬಲವಾಗಿ ಪ್ರಾರಂಭವಾದ ಸೆನ್ಸೆಕ್ಸ್ ಕ್ರಮೇಣ ಚೇತರಿಸಿಕೊಂಡು 48,265ರ ಗರಿಷ್ಠ ಮಟ್ಟ ಮುಟ್ಟಿತು. ನಂತರ ಸೂಚ್ಯಂಕ ಮತ್ತೆ ಜಾರಿ, ಇಂಟ್ರಾಡೇ ಕನಿಷ್ಠ 47,669 ಅಂಕಗಳಿಗೆ ತಲುಪಿತು. ಅಂತಿಮವಾಗಿ 202 ಅಂಕಗಳ ನಷ್ಟದೊಂದಿಗೆ 47,878 ಅಂಕಗಳಲ್ಲಿ ಮುಕ್ತಾಯವಾಯಿತು.
ಇದೇ ಪ್ರವೃತ್ತಿ ಮುಂದುವರೆಸಿದ್ದ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 14,326 ಅಂಕಗಳಿಂದ ಪ್ರಾರಂಭವಾಯಿತು. 14,273-14,461 ಅಂಕಗಳ ನಡುವೆ ಸಾಗಿತು. ಅಂತಿಮವಾಗಿ 64 ಅಂಕ ಕಳೆದುಕೊಂಡು 14,341 ಅಂಕಗಳಲ್ಲಿ ಸ್ಥಿರವಾಯಿತು.
ನಿನ್ನೆ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 75.05 ರೂ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದುರ್ಬಲ ಸಂಕೇತಗಳ ಜೊತೆಗೆ ದೇಶೀಯ ಕೊರೊನಾ ಪ್ರಕರಣಗಳ ಏರಿಕೆಯ ಪರಿಣಾಮಗಳು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿವೆ.
ಪವರ್ ಗ್ರಿಡ್ ಕಾರ್ಪೊರೇಷನ್, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಜೀವ ವಿಮೆ ಟಾಫ್ ಗೇನರ್ಗಳಾದರೇ ಬ್ರಿಟಾನಿಯಾ, ಡಾ. ರೆಡ್ಡಿಸ್ ಲ್ಯಾಬ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ವಿಪ್ರೋ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಟಾಪ್ ಲೂಸರ್ಗಳಾದರು.