ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ.
ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆಯಾಗಿ ಡೀಸೆಲ್ ಮತ್ತು ಪೆಟ್ರೋಲ್ಗಳ ಬೆಲೆ ಇಳಿಕೆ ಆಗುತ್ತಿದೆ. ಕೇಂದ್ರ ಸರ್ಕಾರ, ಕೊರೊನಾ ವೈರಸ್ ಪ್ರೇರೇಪಿತ ಲಾಕ್ಡೌನ್ನಿಂದ ಉಂಟಾದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಡಿಸೇಲ್ ಹಾಗೂ ಪೆಟ್ರೋಲ್ ಮೇಲೆ ಅಬಕಾರಿ ಸುಂಕವನ್ನು ಕ್ರಮವಾಗಿ 10 ರೂ. ಹಾಗೂ 13 ರೂ. ಹೆಚ್ಚಿಸಿದೆ. ಇದರ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ತುಟ್ಟಿ ಆಗಲಿದೆ. ನೂತನ ಪರಿಷ್ಕೃತ ದರವು ಮೇ 6 ಮಧ್ಯರಾತ್ರಿಯಿಂದಲೇ ಅನ್ವಯ ಆಗಲಿದೆ.
ಸೋಮವಾರ ಬೆಂಗಳೂರು ಸೇರಿ ದೇಶದೆಲ್ಲೆಡೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 73.55 ರೂ. ಇದಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 69.59 ರೂ., ಚೆನ್ನೈನಲ್ಲಿ 72.28 ರೂ., ಕೋಲ್ಕತದಲ್ಲಿ 73.30 ರೂ. ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿ 76.31 ರೂ. ಇತ್ತು. ಬೆಂಗಳೂರಿನಲ್ಲಿ ಲೀ ಡೀಸೆಲ್ ದರ 65.96 ರೂ., ದೆಹಲಿಯಲ್ಲಿ 62.29 ರೂ., ಚೆನ್ನೈನಲ್ಲಿ 65.71 ರೂ., ಕೋಲ್ಕತದಲ್ಲಿ 65.62 ರೂ., ಹಾಗೂ ಮುಂಬೈನಲ್ಲಿನ 66.21 ರೂ.ಗೆ ಅಬಕಾರಿ ಸುಂಕದ ಪರಿಣಾಮ ದರ ಏರಿಕೆ ಆಗಬಹುದು.