ನವದೆಹಲಿ: ಅನಿಶ್ಚಿತತೆಗಳು ಮತ್ತು ಹೆಚ್ಚಿನ ಚಂಚಲತೆಯ ಹೊರತಾಗಿಯೂ ಬಿಟ್‌ಕಾಯಿನ್ ಮೊದಲ ಬಾರಿಗೆ ಪ್ರತಿ ನಾಣ್ಯಕ್ಕೆ 65,000 ಡಾಲರ್‌ಗೆ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ತಜ್ಞರ ಪ್ರಕಾರ ಈ ವರ್ಷದ ಅಂತ್ಯದ ವೇಳೆಗೆ ಹೆಚ್ಚು ಬೇಡಿಕೆಯಿರುವ ಕ್ರಿಪ್ಟೋಕರೆನ್ಸಿ 100,000 ಡಾಲರ್‌ಗೆ ಬರಲಿದೆ ಎಂದು ವ್ಯವಹಾರ ಕ್ಷೇತ್ರದ ತಜ್ಞರು ಅಂದಾಜಿಸಿದ್ದಾರೆ.
ಯುಎಸ್ ಹೂಡಿಕೆದಾರರಿಗೆ ನಿಮಯ-ವಹಿವಾಟು ನಿಧಿಯನ್ನು ಯಶಸ್ವಿಯಾಗಿ ಆರಂಭಿಸಿದ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ಮೊದಲ ಬಾರಿಗೆ ಈ ಸಾಧನೆ ಮಾಡಿ ದಾಖಲೆ ಬರೆದಿದೆ. ಇಂದು ಅಮೆರಿಕ ಷೇರು ಮಾರುಕಟ್ಟೆ ಆರಂಭವಾದ ಕೆಲವೇ ನಿಮಿಷದಲ್ಲಿ ಬಿಟ್‌ಕಾಯಿನ್ ಬೆಲೆಯು ಸಾವಿರ ಡಾಲರ್ಗಳಿಗಿಂತ ಹೆಚ್ಚಿನ ಮೊತ್ತಕ್ಕೆ ಏರಿಕೆಯೊಂದಿಗೆ ಗಮನಾರ್ಹವಾದ ಮಟ್ಟಕ್ಕೆ ತಲುಪಿದೆ. ಒಂದು ದಶಕದ ಇತಿಹಾಸದಲ್ಲಿ ಕ್ರಿಪ್ಟೋಕರೆನ್ಸಿ ವ್ಯಾಪಾರದ ವಿಶೇಷ ವಿದ್ಯಮಾನ ಇದಾಗಿದೆ.
ಇದು ಐತಿಹಾಸಿಕ ಕ್ಷಣ ಎಂದು ಕ್ರಿಸ್ಟೋ ಸಲಹಾ ಸಂಸ್ಥೆಯಾದ ಮಕರಾದ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಜೆಸ್ಸಿ ಪ್ರೌಡ್ಮನ್ ಹೇಳಿದ್ದಾರೆ. ವಿಶಾಲವಾದ ಡಿಜಿಟಲ್-ಆಸ್ತಿ ವರ್ಗದ ಇತಿಹಾಸದಲ್ಲಿ ಇದು ನಿಜವಾಗಿಯೂ ಅರ್ಥಪೂರ್ಣವಾದ ಗುರುತು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಯುಎಸ್‌ನಲ್ಲಿ ಪಟ್ಟಿ ಮಾಡಲಾದ ಮೊದಲ ಬಿಟ್ ಕಾಯಿನ್-ಲಿಂಕ್ಡ್ ಎಕ್ಸ್ಚೇಂಜ್-ಟ್ರೇಡೆಡ್ ಫಂಡ್ ಮಂಗಳವಾರ ಎರಡನೇ ಅತಿ ಹೆಚ್ಚು ವ್ಯಾಪಾರ ಮಾಡಿದ ನಿಧಿಯಾಗಿ ದಾಖಲಿಸಲ್ಪಟ್ಟಿದೆ.