ನವದೆಹಲಿ: ಲಾಕ್ಡೌನ್ ಅವಧಿಯಲ್ಲಿ ದೇಶದ ನಗರ ವಾಸಿಗರ ಪ್ರತಿ 10 ಜನರ ಪೈಕಿ ಒಂಬತ್ತು ಮಂದಿ (ಶೇ 89) ಅಗತ್ಯವಲ್ಲದ ಸರಕು ಮತ್ತು ಸೇವೆಗಳ ಪಟ್ಟಿಯಲ್ಲಿ ಬ್ಯಾಂಕಿಂಗ್ ಸೇವೆ ಅತ್ಯವಶ್ಯಕ ಎಂದು ಸಮೀಕ್ಷೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
40ಕ್ಕೂ ಅಧಿಕ ವಯಸ್ಸಿನ ಸಂವಾದಿಗಳು ಶೇ 91ರಷ್ಟು ಬ್ಯಾಂಕಿಂಗೆ ಆದ್ಯತೆ ನೀಡಿದ್ದರೇ 18-29 ವಯಸ್ಸಿನವರು ಶೇ 86ರಷ್ಟು ನೀಡಿದ್ದಾರೆ. ಶೇ 74ರಷ್ಟು ಪ್ರತಿವಾದಿಗಳು ಆನ್ಲೈನ್ ಹೋಮ್ ರಿಪೇರಿ ಸೇವೆಗಳು ನಿರ್ಣಾಯಕ ಎಂದು ಭಾವಿಸಿದ್ದಾರೆ.
ಬೇಸಿಗೆಯ ಆರಂಭದಲ್ಲಿ ಎಸಿ ಮತ್ತು ಫ್ರಿಡ್ಜ್ ರಿಪೇರಿ ಸೇವೆ ಸಹ ಮುಖ್ಯವಾದದ್ದು ಎಂದಿದ್ದಾರೆ. ದಿನಪತ್ರಿಕೆ, ನಿಯತಕಾಲಿಕೆ ಮತ್ತು ಪೇಟೆ ಮಳಿಗೆಗೆ ತಲಾ ಶೇ 61ರಷ್ಟು. ಆಲ್ಕೋಹಾಲ್- ಶೇ 16ರಷ್ಟು ಮತ್ತು ಸಿಗರೇಟು- ಶೇ 12ರಷ್ಟು ಆದ್ಯತೆ ನೀಡಿದ್ದಾರೆ ಎಂದು ಯುವ್ಗೌವ್ (YouGov) ಸಮೀಕ್ಷೆ ತಿಳಿಸಿದೆ.
ಪಶ್ಚಿಮ ಭಾರತದ ಬಹುತೇಕ ಸಂವಾದಿಗಳು ಆಲ್ಕೋಹಾಲ್ ಮತ್ತು ಸಿಗರೇಟ್ ಅಂಗಡಿಗಳು ಅವಶ್ಯಕ ಸೇವೆಗಳಡಿ ಪರಿಗಣಿಸಿ ಎಂದು ಶೇ 24 ಮತ್ತು ಶೇ 17ರಷ್ಟು ಪ್ರತಿಕ್ರಿಯೆ ನೀಡಿದ್ದಾರೆ. ದಕ್ಷಿಣ ಭಾರತದವರು ಸುದ್ದಿ ಪತ್ರಿಕೆಗಳಿಗೆ ಅತಿಹೆಚ್ಚಿನ ಒಲವು ನೀಡಿದ್ದಾರೆ. ಪೇಟೆ ಮಳಿಗೆಗಳ ಬೇಡಿಕೆಯು ದಕ್ಷಿಣ ಭಾರತದಲ್ಲಿ ಕಡಿಮೆ ಇದೆ. ಟಯರ್-2 ನಗರಗಳಲ್ಲಿ ಶೇ 57 ಮತ್ತು ಟೈರ್-3 ಶೇ 59ರಷ್ಟು, ಟೈರ್-1 ಶೇ 66ರಷ್ಟಿದೆ.