ನವದೆಹಲಿ: ಕೇಂದ್ರ ಸರ್ಕಾರವು ವಿಮಾನಗಳಿಗೆ ಬಳಸುವ ಎಟಿಎಫ್ ಇಂಧನ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವೈಮಾನಿಕ ಇಂಧನ ದರ ಏರಿದ ತತ್ಪರಿಣಾಮ ದೇಶಿ ಮಾರುಕಟ್ಟೆಯಲ್ಲಿ ಜೆಟ್ ತೈಲ ದರದ ಮೇಲೆ ಶೇ 2.6ರಷ್ಟು ಏರಿಕೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕಿ.ಲೀ. ವೈಮಾನಿಕ ವಿಮಾನ ಇಂಧನ ದರದಲ್ಲಿ ₹ 1,637 ಹೆಚ್ಚಳವಾಗಿದ್ದು, ₹ 64,323.76 ದೊರೆಯುತ್ತಿದೆ.
ಕಳೆದ ಡಿಸೆಬರ್ 1ರಂದು ಎಟಿಎಫ್ ದರದಲ್ಲಿ 13.88 ರೂ. ಏರಿಕೆ ಮಾಡಲಾಗಿತ್ತು. ಈಗ ಮತ್ತೆ ದರ ಏರಿಕೆ ಮಾಡಿದ್ದು, ಮಂದಗತಿಯಲ್ಲಿ ಸಾಗುತ್ತಿರುವ ವಿಮಾನಯಾನ ಉದ್ಯಮಕ್ಕೆ ದರ ಏರಿಕೆಯು ಹೊಡತ ನೀಡಲಿದೆ. ಭಾರತವು ಶೇ 84 ಇಂಧನವನ್ನು ವಿದೇಶಗಳ ಮೇಲೆ ಅವಲಂಭಿಸಿದೆ.
ಹೊಸ ವರ್ಷದ ಮೊದಲ ದಿನ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ದೆಹಲಿಯಲ್ಲಿ ಕ್ರಮವಾಗಿ ₹ 75.14 ಹಾಗೂ 67.96 ದರದಲ್ಲಿ ಮಾರಾಟ ಆಗುತ್ತಿದೆ. ಉಳಿದಂತೆ ಪ್ರಮುಖ ಮೆಟ್ರೋ ನಗರಗಳಾದ ಮುಂಬೈ- ₹ 80.79 & ₹ 71.31, ಚೆನ್ನೈ- ₹ 78.12 & ₹ 71.86- ಕೋಲ್ಕತ್ತಾ- ₹ 77.79 & ₹ 70.38 ಹಾಗೂ ಬೆಂಗಳೂರು- ₹ 77.32 & ₹ 67.97 ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಆಗುತ್ತಿದೆ.