ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆಗಳ (ಎಫ್‌ಐಐ) ಏರಿಕೆಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಕಳೆದ ಮೂರು ದಿನಗಳಲ್ಲಿ ನಿವ್ವಳ ಎಫ್‌ಐಐ ಒಳಹರಿವು 14,786.57 ಕೋಟಿ ರೂ.ಯಷ್ಟಾಗಿದೆ.
ಮಂಗಳವಾರದ ವಹಿವಾಟಿನಂದು ಸೆನ್ಸೆಕ್ಸ್ ಮೊದಲ ಬಾರಿಗೆ 43,000 ಅಂಕಗಳ ಗಡಿ ದಾಟಿತು. ಕೋವಿಡ್ ಲಸಿಕೆಯ ಆರಂಭಿಕ ಪ್ರಾಯೋಗಿಕ ಫಲಿತಾಂಶಗಳು ಶೇ 90ರಷ್ಟು ಯಶಸ್ಸು ಕಂಡಿದೆ ಎಂದು ಫೈಜರ್ ಹೇಳಿಕೆಯ ನಂತರ, ಭಾರತೀಯ ಮಾರುಕಟ್ಟೆ ಹಾಗೂ ಜಾಗತಿಕ ಪೇಟೆಗಳು ಏರಿಕೆ ದಾಖಲಿಸಿದವು.
ಡೆಮೊಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್ ಮುಂದಿನ ಅಮೆರಿಕ ಅಧ್ಯಕ್ಷರಾಗುತ್ತಾರೆ ಎಂಬುದು ಸ್ಪಷ್ಟವಾದ ನಂತರ ದೇಶೀಯ ಮಾರುಕಟ್ಟೆಗಳು ಜಿಗಿತ ಕಂಡವು. ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದ ನಿರ್ಗಮಿಸುವುದರಿಂದ ಷೇರು ಮಾರುಕಟ್ಟೆಗಳಲ್ಲಿ ಕುಸಿತ ಉಂಟಾಗಬಹುದು ಎಂಬ ನಿರೀಕ್ಷೆ ಸುಳ್ಳಾಗಿಸಿವೆ.
ಟ್ರಂಪ್ ತಂದ ರಕ್ಷಣಾತ್ಮಕ ಕ್ರಮಗಳ ಸರಳೀಕರಣ, ಬೈಡನ್ ಆಡಳಿತದಲ್ಲಿ ಅಮೆರಿಕ ಆರ್ಥಿಕತೆಗೆ ದೊಡ್ಡ ಪ್ರಚೋದಕ ಪ್ಯಾಕೇಜ್ ಗೋಷಣೆ. ಇದಲ್ಲದೆ ಎಚ್-1ಬಿ ವೀಸಾ ಮಾನದಂಡಗಳ ಸರಾಗಗೊಳಿಸುವ ಭರವಸೆಯು ಐಟಿ ಷೇರುಗಳ ಹೆಚ್ಚಳಕ್ಕೆ ಕಾರಣವಾದವು.
ಅಕ್ಟೋಬರ್‌ನಲ್ಲಿ ಎಫ್‌ಐಐ ಒಳಹರಿವು 2.5 ಬಿಲಿಯನ್ ಡಾಲರ್ ಆಗಿತ್ತು. ಎಫ್‌ಐಐದಾರರು ನಿವ್ವಳ ಖರೀದಿದಾರರಾಗಿದ್ದ ಸಮಯದಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆಗಳು (ಡಿಐಐ) ನಿವ್ವಳ ಮಾರಾಟಗಾರರಾಗಿ ಉಳಿದಿದ್ದಾರೆ. ಅಕ್ಟೋಬರ್‌ನಲ್ಲಿ ಡಿಐಐ ಹೊರಹರಿವು 2.4 ಬಿಲಿಯನ್ ಆಗಿತ್ತು. ಇದು 2016ರ ಮಾರ್ಚ್ ಬಳಿಕದ ಹೆಚ್ಚಿನ ಮಾಸಿಕ ಹೊರಹರಿವಾಗಿದೆ.
ನವೆಂಬರ್‌ನಲ್ಲಿ ಇದುವರೆಗೆ ನಿವ್ವಳ ಡಿಐಐ ಹೊರಹರಿವು 9,826.17 ಕೋಟಿ ರೂ. ಇದ್ದರೆ ನಿವ್ವಳ ಎಫ್‌ಐಐ ಒಳಹರಿವು 17,947.80 ಕೋಟಿ ರೂ.ಯಷ್ಟಿದೆ.